ಜನಿಸಿದನು ಬುದ್ಧ ವೈಶಾಖ
ಮಾಸದ ಶುದ್ಧ ಪೂರ್ಣಿಮೆಯೆಂದು
ಮಾಯಾದೇವಿಯ ಉದರದಲಿ
ಮುಂದಿನ ದಿನಮಾನದಲಿ
ಸನ್ಯಾಸಿ ಆಗುವನೆಂದು
ಬರೆದಿತ್ತು ಅವನ ಜಾತಕದಲಿ
ಅರಮನೆ ಬಿಟ್ಟು ಹೋಗದಂತೆ
ನೋಡಿಕೊಂಡರೂ ತಪ್ಪಲಿಲ್ಲ
ವಿಧಿ ಬರಹದ ಬರವಣಿಗೆಯಲಿ
ಅಂದು ನಗರ ಸಂಚಾರಕ್ಕೆಂದು
ಹೊರಟಾಗ ಕಂಡನು ರೋಗಿ
ಮುಪ್ಪು ಸಾವು ನಡು ಬೀದಿಯಲಿ
ಭಾವುಕನಾಗಿ ಕಾರಣವ ಹುಡುಕಲೆಂದು
ಅರಮನೆ ರಾಜ ವೈಭವ ತೊರೆದು
ಹೊರಟನು ಕಾಡಿನೆಡೆಗೆ ಮಧ್ಯರಾತ್ರಿಯಲಿ
ಮುಂದೆ ಬೋಧಿ ವೃಕ್ಷದ
ಕೆಳಗೆ ಜ್ಞಾನಾಸಕ್ತನಾಗಿ ಕುಳಿತಿರಲು
ಉದಿಸಿತು ಜ್ಞಾನ ಬುದ್ಧನಿಗೆ
ಆಸೆಯೇ ದುಃಖಕೆ ಮೂಲ
ಎನ್ನುತ ಸಾರಿ ಸಾರಿ ಹೇಳಿದನು
ಗೌತಮನು ಇಡೀ ಜಗಕೆ
ಸಿದ್ದು ಮೂಲಿಮನಿ
ಉಪನ್ಯಾಸಕರು ಬೀಳಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.