ಶತ ಶತಮಾನದ ಆರಾಧ್ಯ ದೈವ
ಇಷ್ಟಲಿಂಗವ ಧರಿಸಿ ಎನಿಸಿದ ಬಸವ
ಮೂರ್ತಿ ಪೂಜೆ ಖಂಡಿಸಿದ ಮಹಾನುಭಾವ
ಅಂಕಿತವದು ಕೂಡಲ ಸಂಗಮ ದೇವಾ…
ದುಡಿಮೆಯಲಿ ಕೈಲಾಸ ಕಂಡ
ಕಾಯಕಯೋಗಿ,
ಹಸಿದು ಬಂದವರಿಗೆ ಅನ್ನ ದಾಸೋಹಿ,
ಜ್ಯೋತಿರ್ಲಿಂಗದ ಮಹಿಮೆ ಸಾರಿದ ಶಿವ ಶರಣ..
ಸಮಾನತೆಯ ಹರಿಕಾರ ಬಸವಣ್ಣ…
ಅಕ್ಷಯ ತದಿಗೆಯಂದು ಜನಿಸಿತೊಂದು ಜ್ಯೋತಿ
ಲೋಕ ಕಲ್ಯಾಣಕಾಗಿ ಶ್ರಮಿಸಿತು
ವಚನಾಮೃತವ ಸಾರಿ
ಅಸಮಾನತೆಯ ತೊಲಗಿಸಲು
ಅಂಧಕಾರವ ಅಳಿಸಲು ಮುನ್ನಡೆಯಿತು
ಅನುಭವ ಮಂಟಪದ ಕೀರ್ತಿ
ಜ್ಞಾನ ಭಂಡಾರವಿದು
ಸಮಾಜ ಶುದ್ಧಿ ಮಾಡುವುದು
ಮೇಲು ಕೀಳೆಂಬ ಬೇಧವ ಮಾಡದು..
ಮಾನವ ಕುಲವೊಂದೇ ಎಂಬುದು
ಹೀನ ಕೃತ್ಯಗಳ ತೊರೆಯುವುದು
ಸವಿತಾ ದೇಶಪಾಂಡೆ
ತಾವರಗೇರಾ
ತಾ : ಕುಷ್ಟಗಿ ಜಿ : ಕೊಪ್ಪಳ
ಮೊ ಸಂಖ್ಯೆ :7349094205
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ