You are currently viewing ಬೇವು ಬೆಲ್ಲ

ಬೇವು ಬೆಲ್ಲ

ಬೇವು ಬೆಲ್ಲವ ಸೇರಿಸಿ ಹಂಚುತಲಿ
ತಳಿರು ತೋರಣವನು ಕಟ್ಟುತಲಿ
ಆಚರಿಸೋಣ ಯುಗಾದಿ ಹಬ್ಬವನು
ತರುವುದು ಮತ್ತೆ ಹೊಸತನವನು

ಚೈತ್ರದ ಚಿಗುರಿನ ಸೊಬಗಿನಲಿ ಕೋಕಿಲಗಾನ
ಮೈಮನ ತಣಿಸುವ ನವಿಲಿನ ನರ್ತನ
ಹೊಸ ಫಲವು ಹೊಸ ಬೆಳೆ ನವಪರ್ವವು
ನವೋಲ್ಲಾಸ ತುಂಬುತ ವಸಂತನಾಗಮನವು

ಹಬ್ಬದಲ್ಲಿಯೇ ಶ್ರೇಷ್ಠ ಯುಗಾದಿ ಹಬ್ಬವು
ಶ್ರೀರಾಮ ಪಟ್ಟಾಭಿಷೇಕ ನಡೆದ ದಿನವು
ಪೌರಾಣಿಕ ಐತಿಹಾಸಿಕ ಹಿನ್ನೆಲೆಯಿಹುದು
ಶುಭ ಮೂಹೂರ್ತಗಳಲ್ಲೊಂದಾಗಿಹುದು

ಹೊಸ ಬಟ್ಟೆ ತೊಟ್ಟು ನಲಿಯೋಣ
ಸಾಮರಸ್ಯದಿಂದ ಎಲ್ಲರಲಿ ಬೆರೆಯೋಣ
ಚಾಂದ್ರಮಾನ ಯುಗಾದಿ ಹಬ್ಬವದು
ವಸಂತಕಾಲದಿ ಹೊಸತನದಲಿ ಬರುವುದು

ದೀಪಾಲಿ ಸಾಮಂತ
ದಾಂಡೇಲಿ, ಉತ್ತರ ಕನ್ನಡ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.



This Post Has One Comment

  1. ಅನ್ನಪೂರ್ಣ ಪದ್ಮಸಾಲಿ

    ಚೆನ್ನಾಗಿದೆ

Comments are closed.