You are currently viewing ಬೆಳಕಿನ ಹಬ್ಬ

ಬೆಳಕಿನ ಹಬ್ಬ

ಆಗೊಂದಿತ್ತು ಆಚರಣೆ ಮನೆಮಂದಿಗೆ
ಒಗ್ಗಟ್ಟಿನೊಂದಿಗೆ ಒಬ್ಬಟ್ಟು ಎಲ್ಲರಿಗೆ
ಮಕ್ಕಳಿಂದ ಹಿರಿಯರ ಹುರುಪಿಗೆ
ಬಣ್ಣದ ರೇಷ್ಮೆಯಲ್ಲಿ ಮಿಂಚು ಉಡುಪಿಗೆ

ಪೋಣತಿ ಹಚ್ಚುತ ಅಂಗಳದಿ
ಸುತ್ತಲೂ ಕಾಣುವುದು ಹೊಂಬಣ್ಣದಿ
ಹೂರಂಗೋಲಿ ತಳಿರು ತೋರಣದಿ
ಮಿನುಗುವ ನಕ್ಷತ್ರದಂತೆ ಮನೆಮನದಿ

ಶಬ್ದಗೊಂದಲ ಬೇಡವೆಂದ ಹಿರಿಯರು
ಮಕ್ಕಳ ಕೈಯಲಿ ಕೇವಲ ಚುರ್ ಚುರ್ರ್ಬತ್ತಿಗಳು
ಹಿಂಸೆಯಾಗುವುದು ಹಸುಕರುಗಳಿಗೆ ಮರೆಯದಿರಿ
ಎಂದು ನೀವೆಲ್ಲಾ ಪಟಾಕಿ ಸುಡದಿರಿ

ದೀಪದಿಂದ ಅಜ್ಞಾನವೆಲ್ಲ ತೊಲಗಲಿ
ಕ್ಲೇಶಕಳೆದು ಹರುಷ ತುಂಬಲಿ
ಆರೋಗ್ಯ,ಆಯಸ್ಸು, ನೆಮ್ಮದಿ ದೊರೆಯಲಿ
ದೀಪಾವಳಿ ಹಬ್ಬದಿಂದ ಶುಭವಾಗಲಿ

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.