ಮಹಾರಾಷ್ಟ್ರ ಜಿಲ್ಲೆಯ ಮಾಥೆರಾನ್ ನಲ್ಲಿ ಜನಿಸಿದವರು
ತಂದೆ ಡಾ/ರಘುನಾಥ್ ಕಾರ್ನಾಡ್ ತಾಯಿ/ ಕೃಷ್ಣಾಬಾಯಿಯವರ ಸುಪುತ್ರರು
ಗಿರೀಶ್ ಕಾರ್ನಾಡ್ ಎಂಬ ಹೆಸರಾಂತ ಕವಿ ದಿಗ್ಗಜರು
ಕನ್ನಡ ಇಂಗ್ಲೀಷ್ ಹಿಂದಿ ಮರಾಠಿ ಭಾಷಾ ಪ್ರವೀಣರು
ಭಾರತದ ನಾಟಕಕಾರರು ಖ್ಯಾತ ಲೇಖಕರಿವರು
ಏಳನೇಯ ಜ್ಞಾನ ಪೀಠ ಪ್ರಶಸ್ತಿಯ ಪಡೆದವರು
ಬುದ್ದಿಜೀವಿ ಬಹುಭಾಷಾ ಪಂಡಿತರೆಂದು ಪ್ರಖ್ಯಾತರು
ರಂಗಕರ್ಮಿ ಸಿನೆಮಾ ನಟ ನಿರ್ದೇಶಕ ಚಿಂತಕರಿವರು
ವಂಶವೃಕ್ಷ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯ ಪಡೆದವರು
ಪ್ರಗತಿಶೀಲ ಸಮತಾವಾದಿ ನೇರನುಡಿಯ ವ್ಯಕ್ತಿತ್ವದವರು
ಹಲವಾರು ಭಾಷೆಗಳಿಗೂ ನಾಟಕಗಳನ್ನು ಅನುವಾದಿಸಿದವರು
ಕಸ್ತೂರಿ ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದವರು
ಅತ್ಯುನ್ನತ ಪದ್ಮಶ್ರೀ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌ ಡಾಕ್ಟರೇಟ್ ಪಡೆದವರು
ದೇಶ ವಿದೇಶಗಳಲ್ಲೂ ತಮ್ಮ ವಿದ್ವತ್ ನ್ನು ಪ್ರದರ್ಶಿಸಿದವರು
ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಸಾಹಿತಿಯಿವರು
🙏ಧನ್ಯವಾದ
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ಕಪ್ಪೆಚಿಪ್ಪಿನೊಳಗಿನ ಮುತ್ತು
- Original price was: ₹100.00.₹90.00Current price is: ₹90.00.
-

