You are currently viewing ಬಾಗಿಲು ಕೋಟೆ

ಬಾಗಿಲು ಕೋಟೆ

ಕಲಾಕುಸುಮದ ಹಾರ ಬಾಗಿಲುಕೋಟೆ
ರಾಜರಾಳಿದ ನಾಡು
ರತ್ನತ್ರಯರನ್ನರುದಿಸಿದ ಕವಿಗೂಡು
ವಾತಾಪಿ ಚಾಲುಕ್ಯರ ನೆಲೆವೀಡು
ಬನದ ಸಿರಿದೇವಿಯ ತವರೂರು.

ಕೃಷ್ಣ, ಘಟಪ್ರಭೆ, ಮಲಪ್ರಭೆಯರ
ಶರಣ ಬಸವೈಕ್ಯರ ವಚನದ ಜಾಡು
ಮೂಲ ಜನಪದ ಕಾವ್ಯದಗೂಡು
ಪಾರಿಜಾತ ಕಲೆಯ ಪರಿಮಳದ ಜೋಡು

ಸಂಗೀತ, ಸಾಹಿತ್ಯ, ಶಿಲ್ವೈಕ್ಯದ ಸಿರಿ
ಜ್ಞಾನ ವಿಜ್ಞಾನದ ಚತುರತೆಯ ಗರಿ
ಸಂತ ಮಹಾಂತ ಶರಣರ ಝರಿ
ಅನ್ನದಾತನ ದುಡಿಮೆಯ ಗುರಿ

ಬಾಗಿಲು ತೆರಿದಿದೆ ವಿದ್ಯಾನಗರಿ
ಕೋಟೆಯೊಳಗಿದೆ ಸಕಲ್ವೆಸಿರಿ
ಇದು ಜಗದಗಲದ ಕೋಟೆ
ಬಸವನ ಲೇಖನಿಯ ಮಹಾಕೋಟೆ,

ಶ್ರೀ ಬಸಲಿಂಗಯ್ಯ ಫ. ಮಠಪತಿ
ಸಂಗೀತಗಾರರು, ಉಪನ್ಯಾಸಕರು,
ಬಾಗಲಕೋಟೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.