ಸ್ವಾರ್ಥದ ಹಂಬಲಕೆ ಬಿದ್ದು ಬಾಧೆ
ಆದೀತು ಗೆಳೆಯ ಬೆಳಕು ಕತ್ತಲೆಗೆ
ಬದುಕ ಬಿರುಗಾಳಿಗೆ ಸೋತ ನಡೆಗೆ
ಸ್ವಾರ್ಥ ತುಂಬಿದ ಬದುಕಿಗೆ ಎದುರಾಗಿ
ಭರವಸೆಯನು ಹೊತ್ತು ತಾ ದೇವರ ದಾಸನಾಗಿ ಬಾ
ಕರ್ಮದ ಕೋರಿಕೆಯಲ್ಲೇ ಮುಳುಗಿದ
ನಿನ್ನ ಸ್ವಾರ್ಥದ ಪ್ರಪಂಚಕೆ ಹೆಗಲಾಗುವವರಾರು?
ಮನುಜರನು ಮರೆತ ನೀನು ಮಾನವತೆಯ
ಸರ್ವಸ್ವ ಅನುಭವಿಸುವಿ ಹೇಗೆ? ಹೃದಯದ
ಹೊಳಪು ನೊಂದ ನೆನಪು ಜೀವನಕ್ಕೆ ಬೆಳಕು ಕೊಡುವುದು.
ಹಣೆಯ ರೇಖೆಗಳಲ್ಲಿ ಸ್ವಾರ್ಥವನು ಹಚ್ಚಿಕೊಂಡು
ಪ್ರೀತಿ ಉಸುರುವ ರಂಧ್ರಗಳನು ಮುಚ್ಚಿ
ದೂಡುವೆಯಾ ಮಂಜಿನ ಕಾಲುವೆಯಲಿ
ಮುಖದಲ್ಲಿ ದಯೆಯ ದೀಪವನು ಹಚ್ಚಿಕೊಂಡು
ಬದುಕ ಕಡ್ಡಗೆ ಕಿಡಿ ತಾಕಿಸುವೆಯಾ
ಸ್ವಾರ್ಥಕ್ಕೆ ದಾರಿ ತೋರುವ
ಅಹಂಕಾರದ ಮುದ್ದು ಸುಗ್ಗಿಗಳೆ
ಪ್ರೇಮದ ವರ್ತಮಾನದಲ್ಲಿ
ಮೈಗೂಡುವ ಧೀರರೆ
ಸ್ವಾರ್ಥದ ಬಲೆಗೆ ಬಿದ್ದ ನೀತಿವಂತರೆ!
ನೀವು ಮರೆಯದೆ ಗಮನಿಸಿ
ಪ್ರೇಮವೆಂಬ ಹೆಜ್ಜೆ ಹಾಕಿ
ಬರಿಯ ಆಸೆಗೆ ಬೀಳಬೇಡಿ
ಮೂಡಿದ ಹೃದಯದ ಬಾಗಿಲನು
ತೆರೆದುಕರುಣೆಯನು ಹರಿಸಿ
ಸ್ವಾರ್ಥವನು ನಾಶಮಾಡಿ
ಬದುಕ ಜೇನನು ಹನಿಸಿ.
ದಾವಲಸಾಬ ನರಗುಂದ
ಸಂಶೋಧನಾ ವಿದ್ಯಾರ್ಥಿ
ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ
ಕ.ವಿ.ವಿ, ಧಾರವಾಡ
ಮೊ.9743608020
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.