ಬಂದೇ ಬಿಟ್ಟಿತ್ತು ಕ್ಯಾಲೆಂಡರ ದಿನ
ಬದಲಾಗಿದ್ದು ಕ್ಯಾಲೆಂಡರ್ ಮಾತ್ರ
ಕೊನೆಯ ದಿನವು ಮೌನ ಮುರಿದು
ಮರುದಿನ ಹೊಸ ದಿನವಾಗಿ ಬೆಳೆದು
ಅನುಭವಕ್ಕೆ ಬರುತ್ತಿತ್ತು ನನಗೆ ಅಂದು
ಜಗಳ ಮರೆತು ಜಗದಲ್ಲಿ ಸಾಗುವುದು
ಕನಸಿನಂತೆ ಒಂದು ಸಣ್ಣ ಪುಟ್ಟ ತೆರೆದು
ಬರೆಯಲು ಪ್ರಾರಂಭಿಸಿದೆ ನಾ ಇಂದು
ಪ್ರೀತಿಯ ಮಮಕಾರದ ಬದುಕು
ನಂಬಿಕೆ ವಿಶ್ವಾಸದ ಪ್ರಯಾಣಕು
ಸುಖ ಶಾಂತಿ ಸಂಪತ್ತಿನ ಬಂಡಿಗು
ನಿನ್ನ ಆಶೆಯ ಚಿಗುರು ಮೂಡಿಲ್ಲಿ
ಜೈನಿನ ಗೂಡಿನಂತೆ ಬೆಳೆಯಲ್ಲಿ
ಶತ್ರುತನ ಮರೆತು ಮಿತ್ರುನ ಬಂಡಿಲ್ಲಿ
ನಿನ್ನ ಆಶೆಯ ಗುರಿಯನ್ನು ಹತ್ತಲ್ಲಿ
ಈ ದಿನ ಜಯ ನಿನ್ನದಾಗಲಿ ಬದುಕಲ್ಲಿ
ಕುಗ್ಗಬೇಡ ಹಿಗ್ಗು ದಿನನಿತ್ಯದ ಬದುಕಲ್ಲಿ
ಹೊಸಗಾಲದ ಚೈತನ್ಯ ಹೊಸ ವರ್ಷ
ಉಸಿರಿಗೆ ಉತ್ಸಾಹ ಉಲ್ಲಾಸದ ವರ್ಷ
ಕನಸಿನ ಸುಗಮ ಜೀವನಕ್ಕೆ ಈ ವರ್ಷ
ಉತ್ತುಂಗಕ್ಕೆ ಏರಲಿ ನಿತ್ಯ ಸತ್ಯ ವರ್ಷವು
ಮಹಾಂತೇಶ ಖೈನೂರ