You are currently viewing ಬಂಗಾರದ ಹನಿಗಳು

ಬಂಗಾರದ ಹನಿಗಳು

ರಾತ್ರಿ ಆಕಾಶದಲ್ಲಿ ಹೊಳೆಯುವ
ನಕ್ಷತ್ರಗಳಂತೆ ಶಾಲಾ ಮಕ್ಕಳು
ಆಟ ಪಾಠ ಕೂಟದ ಜೊತೆಗೆ ಕಾಟ ಕೊಟ್ಟು
ಪ್ರೀತಿಯಿಂದ ಗೌರವಿಸುವ ದೇವರು

ಶಾಲಾ ದೇಗುಲದಲ್ಲಿ ಬೋಧಿಸುವ ಗುರುಗಳೇ
ಪೂಜಾರಿಗಳು ಕಲಿಯುವ ಮಕ್ಕಳೇ ದೇವರುಗಳು
ಅಸಂಖ್ಯ ಆಕಾಶಕಾಯಗಳಂತೆ
ಎಣಿಸಲಾಗದಷ್ಟು ಮಕ್ಕಳ ಪಡೆದ ನಾವೇ ಧನ್ಯ

ಬಂದಾಗ ಶಿರಬಾಗಿ ನಮಿಸಿ ಹೋಗುವಾಗ
ಕೈ ಬೀಸಿ ಬೀಳ್ಕೊಡುವ ಹೂವುಗಳು
ಹಾದಿ ಬೀದಿಯಲ್ಲಿ ಸಿಕ್ಕಾಗ ವಂದಿಸಿ
ಅಭಿಮಾನ ತೋರಿ ಹಳೆಯ ನೆನಪು ಮಾಡುವರು

ಶಿಕ್ಷಣ ಪಡೆದ ಚಿಣ್ಣರು ದೇಶದ ಶಕ್ತಿ
ಒಬ್ಬರು ಒಂದೊಂದು ಕ್ಷೇತ್ರದಲ್ಲಿ ಸೈ
ಎನಿಸಿಕೊಂಡು ಗುರುಗಳ ಗೌರವ ಹೆಚ್ಚಿಸುವ
ನೀವಲ್ಲವೇ ನಮ್ಮ ಬಂಗಾರದ ಹನಿಗಳು

ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.