You are currently viewing ಅವಳು…..

ಅವಳು…..

ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

ಅವಳು -!
ಬರಿ ಅವಳಲ್ಲ,ಅವಳಿಲ್ಲದ್ಯಾರಿಲ್ಲ
ಬಲ್ಲವರ ಬಲ,ಧರೆಯ ಛಲ
ಜೀವದೋಲೆಯ ಶಾಲ್ಮಲ.

ಅವಳು…
ಅವಳ ಬದುಕಲ್ಲಾ
ಬದುಕಿಗೆ ಬದುಕಿಸುವವಳು
ಮನೆಯ-ಮನದ ಬೆಳಕವಳು

ಅವಳು….!
ಅವಳು ಹಿಡಿಯಷ್ಟಲ್ಲಾ
ಮಡಿ-ಹೂವಿನಷ್ಟು,ದೈವಧರೆಯಷ್ಟು
ಭವದೊಲವಿನಷ್ಟು,ಪಾತಾಳದಷ್ಟು

ಅವಳು-!
ಅವಳು ಬರೀ ಅವಳಲ್ಲಾ
ಮಮತೆಯ ಕಡಲು,ಮಗುವಿನೊಡಲು
ಎಲ್ಲಕು ಮಿಗಿಲು,ಇರುಳು-ಹಗಲು..

ಮೈಬೂಬಸಾಹೇಬ. ವೈ.ಜೆ.
ವಿಜಯಪೂರ.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.