You are currently viewing ಅಪ್ಪನ ಸ್ಮರಣೆಯಲ್ಲಿ ಅವ್ವನ ನೆನಪು

ಅಪ್ಪನ ಸ್ಮರಣೆಯಲ್ಲಿ ಅವ್ವನ ನೆನಪು

ಬನ್ನಿ ಎಲ್ಲರೂ ಹೋಗೋಣ ನಬಿಸಾಬರ ಜಾತ್ರೆಗೆ
ಜಾತಿ ಭೇದವ ಮರೆತು ಭಾವೈಕ್ಯತೆಯ ತೇರನೆಳೆಯೋಕೆ
ಸಂಗಮನಾಥನ ಗುಡಿಯಲ್ಲಿ ಕುರಾನ್ ಪಠಣವ ಕೇಳೋಕೆ
ಇಂತಹ ಸಾಮರಸ್ಯದ ಭಾವ ಎಲ್ಲೂ ಸಿಗದು ನೋಡಿರಣ್ಣ

ನೆರೆವರು ಇಲ್ಲಿ ಸಾವಿರು ಸಾವಿರ ಸಂಖ್ಯೆಯಲ್ಲಿ ಜನ
ಜಾತಿ ಪಂಥ ಮೀರಿದ ಊರ ಜನ ಇದ ನೋಡಿ ಕಲಿಯಿರಿ ಇವರನ್ನ
ಒಗ್ಗೂಡಿ ಸ್ವಾಗತಿಸಲು ಸದಾ ಸಿದ್ದರಿರುವರು ನೋಡಿರಣ್ಣ
ಗುರುತಿಸದ ಪ್ರತಿಭೆಗೆ ಗುರುತಿಸಿ ಸನ್ಮಾನಿಸಿ ಗೌರವಿಸುವರು ನೋಡಿರಣ್ಣ

ಶಿಕ್ಷಕ ವೃತ್ತಿಯನ್ನು ಇವರು ಅಚ್ಚುಕಟ್ಟಾಗಿ ನಿರ್ವಹಿಸಿರುವರಣ್ಣ
ಉಪವಾಸ -ವನವಾಸವಿದ್ದು ತುಂಬು ಸಂಸಾರ ಸಾಗಿಸಿದರಣ್ಣ
ಇದ್ದುದ್ದರಲ್ಲಿ ತೊಡೆಮರೆ ಮಾಡಿ ಹಂಚಿ ತಿನ್ನುತ್ತಾ
ಸಂಸಾರ, ಹೆಂಡತಿ, ಮಕ್ಕಳನ್ನು ಸಾಕಿ ಸಲುಹಿದರಣ್ಣ

ಘಟಾನುಘಟಿಗಳು, ಸಾಹಿತಿ, ಸಂತ -ಶರಣರು ಈ ಜಾತ್ರೆಗೆ ಬರುವರಣ್ಣ
ಕೂಡಿ ಎಲ್ಲರೂ ನಬಿಸಾಬರ ಗುಣಗಾನ ಮಾಡುವರಣ್ಣ
ಇವರ ಜನ್ಮ ದಿನದಂದೇ ಗಾಂಧೀ ಶಾಸ್ತ್ರೀಜಿಯವರ ಜನ್ಮದಿನವಣ್ಣ
ಇದೆಂತಹ ಅದ್ಭುತ ತ್ರಿವೇಣಿ ಸಂಗಮ ನೋಡಿ ನಲಿಯಿರಣ್ಣ

ಕಳೆದುಕೊಂಡರೂ ಸೌಭಾಗ್ಯ ಛಲ ಬಿಡದ ಸಹಧರ್ಮಿಣಿ
ಎದೆಗುಂದದೆ ಒಂಟೆತ್ತಿನಂತೆ ಬಾಳ ಬಂಡಿ ಎಳೆದರಣ್ಣ
ಅಂತಹದರಲ್ಲಿ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಮಕ್ಕಳಿಗೆ ನೀಡಿದರಣ್ಣ
ನಬಿಸಾಬರ ತೇರನೆಳೆಯುತ್ತಲೇ ಶಿವನಪಾದ ಸೇರಿದರಣ್ಣ

ಹೆಚ್ ಆರ್ ಬಾಗವಾನ
ಅಧ್ಯಾಪಕರು,ಮುದ್ದೇಬಿಹಾಳ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.