You are currently viewing ಅಪ್ಪ ನನ್ನ ಜೀವನಕ್ಕೆ ಮುನ್ನುಡಿಯಾದೆ

ಅಪ್ಪ ನನ್ನ ಜೀವನಕ್ಕೆ ಮುನ್ನುಡಿಯಾದೆ

ನನ್ನ ಜೀವನದ ದೇವರು ಎಂದು ಕೆಳಲಿಲ್ಲ ನನ್ನಿಂದ
ಸೇವೆಯನ್ನು ತಪ್ಪದೇ ನೀಡುತಿದ್ದ ನಾನು ಕೇಳಿದರೂ
ಕೇಳದಿದ್ದರೂ ವರವನ್ನು ಆ ದೇವರೆ ನನ್ನ ಅಪ್ಪ…

ಜೀವನಕ್ಕೆ ಮುನ್ನುಡಿಯಾದೆ ಜೀವಿಸಲು
ಕನ್ನಡಿಯಾದೆ ಮಕ್ಕಳಿಗಾಗಿ ಕೂಲಿಯಾದೆ
ಮಕ್ಕಳ ಕಷ್ಟ ಹೊರುವ ಹಮಾಲಿಯಾದೆ

ಅಪ್ಪ ಎಂಬ ಎರಡಕ್ಷರದಲ್ಲಿ ಅಡಗಿದೆ
ಶಿವನ ಪ್ರತಿರೂಪ ಕಂಡಿಲ್ಲ ಶಿವನ ಸಾಕ್ಷಾತ್ಕಾರ
ಇರಬಹುದು ಅಪ್ಪನ ಬೆವರಹನಿಯಲ್ಲಿ…

ಶಿವನಿಗೂ ಕೂಡಾ ಇರದಾಯಿತೆನೋ ಬಿಟ್ಟು
ಆತನ ಪ್ರತಿರೂಪವನ್ನಿಲ್ಲಿ ಅದಕ್ಕೆ ಕಸಿದುಕೊಂಡು
ನನಗೆ ಇಲ್ಲದ ಹಾಗೆ ಮಾಡಿದ ನೆರಳನ್ನು ಭೂಮಿಯಲ್ಲಿ.

ಬಸವರಾಜ ನಾಗಾವಿ
ಸಂಶೋಧನಾ ವಿದ್ಯಾರ್ಥಿ, ಕನ್ನಡ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೫೮೦೦೦೩
ಮೊ. ೯೧೧೩೨೧೫೨೭೪


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.




This Post Has One Comment

  1. ನಾಗರಾಜ ಗಂಗಮ್ಮನವರ

    ಅಪ್ಪನಿಲ್ಲದಿದ್ದರೂ ಅಪ್ಪನ ನೆನಪನ್ನು ಕಟ್ಟಿಕೊಡುವ ಕವಿತೆ ಇದು.

Comments are closed.