ಭೂಮಿಮೇಲಿನಅದ್ಭುತಅದಮ್ಯಶಕ್ತಿ
ಜೀವನವೆಲ್ಲಾಮಡದಿಮಕ್ಕಳಿಗಾಗಿಪೂರ್ತಿ
ತನಗಾಗಿ ಏನನ್ನು ಖರೀದಿಸದ ಮೂರುತಿ
ಅಪ್ಪ ನೀನೇ ನಮಗೆ ಸ್ಫೂರ್ತಿ.
ಪ್ರಪಂಚ ತೋರಿಸಿದೆ ಹೆಗಲ ಮೇಲೆ ಕೂರಿಸಿ.
ಹಗಲು ರಾತ್ರಿ ದುಡಿದೆ ಬೆವರ ಸುರಿಸಿ
ಸಾಕಿ ಸಲಹಿದೆ ಕಷ್ಟಕಾರ್ಪಣ್ಯ ಮರೆಸಿ.
ಹಬ್ಬ ಹರಿದಿನದಲ್ಲೂ ಬೀಗಲಿಲ್ಲ ಹೊಸ ಬಟ್ಟೆ ಧರಿಸಿ.
ನನ್ನ ಮಕ್ಕಳೇ ನನಗೆ ಆಸ್ತಿ ಎಂದೆ
ಬಡತನಲ್ಲೇ ಸೌಖ್ಯ ನೀಡಿ ಬೆಳೆಸಿದ ತಂದೆ.
ನಮ್ಮ ಗುಣಗಾನವೇ ನಿನಗೆ ಭಾಷಣದಂತೆ.
ಊರಿನವರಿಗೆಲ್ಲ ಹೇಳಿಕೊಂಡು ಬರುತ್ತಿದ್ದೆ.
ನಿನ್ನ ಕನಸು ನನಸಾಗುವ ಮುಂಚೇ ಯಾಕೆ ಹೋದೆ
ಭಯವಾಗುತ್ತದೆನಿನ್ನಪ್ರೀತಿ ಮಕ್ಕಳಿಗೆ ಮಾರ್ಗ ಮಧ್ಯೆ
ನಾವುಚಿಕ್ಕವರಿರುವಾಗಕುಡಿಯುವುದಕ್ಕೆ ಕಲಿತೆ ಮದ್ಯ
ಯಾವತ್ತೂ ನಿನ್ನ ಹತ್ತಿರ ಸುಳಿಯಲಿಲ್ಲ ವೈದ್ಯ
ನನ್ನಮಕ್ಕಳೇನನಗೆಮುತ್ತುರತ್ನಗಳೆಂದು ಸಂಭ್ರಮಿಸಿದೆ
ನಿನ್ನಋಣವಕೊಂಚತೀರಿಸುವಮುಂಚೆಯೇ ಅಗಲಿದೆ
ಎಲ್ಲರಿಗೂ ಇರಬೇಕು ನಿನ್ನಂತ ತಂದೆ
ಪದಗಳಿಗೂ ನಿಲುಕದ ನಿನ್ನ ನೆನಪೆ ಸುಧೆ.
ಮಲ್ಲಮ್ಮ ವಡ್ಡರ
ಹರಪನಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯ ಅನಂತನಹಳ್ಳಿ ಹರಪನಹಳ್ಳಿ
ಕನ್ನಡ ಭಾಷಾ ಸಹಶಿಕ್ಷಕರು