ಹೆತ್ತ ತಾಯಿಯ ನೆರಳಿನ
ಅಡಿಯಲಿ ಬೆಳೆದ ನಾವುಗಳಿನ್ನು ಚಿಗುರು
ಬದುಕಲು ಅವಕಾಶ ಕಲ್ಪಿಸಿಕೊಟ್ಟ
ದೇವತೆಗೆ ನಾವಿಟ್ಟೆವು ಮಾತೃ ಎಂಬ ಹೆಸರು
ಗರಿಬಿಚ್ಚಿ ಸದಾ ಕುಣಿವ
ನವಿಲಿಗಿಂತ ಸೊಬಗಂತೆಇವಳು
ಅತ್ತರು ನಕ್ಕರು ಕುಂತರೂ ನಿಂತರೂ
ತನ್ನ ಕಂದನದೆ ಚಿಂತೆಯಂತೆ
ಬೆಲೆ ಕಟ್ಟಲು ಸಾಧ್ಯವಲ್ಲದ
ಆಸ್ತಿಅಮ್ಮನ ಮಡಿಲುತನ್ನ
ಮಕ್ಕಳ ಬದುಕಿಗೆ ತನ್ನ ಪ್ರಾಣವ
ಮೀಸಲಿಡುವ ಇವಳು ಸ್ವರ್ಗಕ್ಕಿಂತ ಮಿಗಿಲು
ಇವಳೊಂಥರ ಕಂಡರೂ
ಕಾಣದ ಅಗೋಚರ
ಒಮ್ಮೆ ಕಣ್ಣಿಗೆ ಬಿದ್ದರೆ ಅವಳಷ್ಟು
ಯಾರು ತೋರುವುದಿಲ್ಲ ಕನಿಕರ
ಅವಳಿಂದ ಕಲಿತೆನೊಂದು
ಜೀವನದ ಪಾಠವ
ಸುಖದಲ್ಲೂ ದುಃಖದಲ್ಲೂ
ನಗುತಿರುವ ಅವಳ ಧೈರ್ಯವ
ಯಾರೆಷ್ಟೇ ಅಂದ ಚಂದವಿದ್ದರು
ನನ್ನಮ್ಮ ನನಗೆ ಸುಂದರ
ಅವಳ ಅಂದ ಚಂದವ ನೋಡಿ
ನಾಚಿದನೋ ಆ ಹುಣ್ಣಿಮೆಯ ಚಂದಿರ
ಅವಳೊಂಥರಾ ಹಾಡಿದರೆ ಕಲಿಯುಗ
ಪಡುವುದು ಸಂತೋಷ ಸಡಗರ
ಅವಳ ನವಿಲಿನಂತ ನಾಟ್ಯವ
ಕಲ್ಪಿಸಿಕೊಳ್ಳುವುದೆ ನನಗೆ ನಯನ ಮನೋಹರ
ಅದಕೆ ಹೇಳೋದು ದೊಡ್ಡೋರು ಒಂದು ಮಾತು
ಅಮ್ಮನ ಮಡಿಲು ಸ್ವರ್ಗಕ್ಕಿಂತ ಮಿಗಿಲು
ಅಮ್ಮನ ಮಮತೆ ಬರೆದರು ಮುಗಿಯದ ಕವಿತೆ
ಬರೆಯುತ್ತಿದ್ದರು ಮತ್ತೆ ಮತ್ತೆ ಬರೆಯಬೇಕೆನಿಸಿತೆ
ಆದರೂ ಪ್ರಯತ್ನ ಮೀರಿ ಅಮ್ಮನ ಮೇಲೊಂದು ಈ ಸುಂದರ ಕವಿತೆ
ಅಂಜನ್ ಎನ್
ದೊಡ್ಡಬಳ್ಳಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.