ಕಾಲಚಕ್ರದಿ ಬಡವ ಬಲ್ಲಿದನಾಗುವುದುಂಟು
ಬಲ್ಲಿದ ಬಡವನಾಗುವುದುಂಟು ಕೀರ್ತಿಯ
ಶಿಖರವನ್ನೇರಿದವ ಕಣ್ಮರೆಯಾಗುವುದುಂಟು ಎಲೆಮರೆ
ಕಾಯಿಯಂತಿದ್ದವ ಕೀರ್ತಿಯ ಉತ್ತುಂಗ ಶಿಖರವನ್ನೇರಿದ್ದುಂಟು
ಕಾಸಿನ ಆಸೆಗೆ ಹೇಸಿಗೆಯಲ್ಲಿ ನಾಲಿಗೆ ಹಾಕುವ ಜಿಪುಣ
ಸರ್ವಸ್ವವನ್ನು ತ್ಯಜಿಸಿ ದಾನಿಯಾಗಿರುವುದುಂಟು
ಮಹಾದಾನಿ ಆದವ ಸಮಾಜದಲ್ಲಿನ ತೋರಿಕೆಯ
ಮೇಲಾಟಕ್ಕೆ ಬಲಿಯಾಗಿ ಸ್ವಾರ್ಥಿಯಾಗಿರುವುದುಂಟು
ಅಜ್ಞಾನಿ ಸುಜ್ಞಾನಿಗಳ ಪ್ರೇರಣೆಯಿಂದ ಜ್ಞಾನಿಯಾದ
ಉದಾರಣೆಗಳುಂಟು ಜ್ಞಾನಿಗಳು ಅಜ್ಞಾನಿಗಳಾದ ಪ್ರಸಂಗವನ್ನು
ಕಂಡಿರಾ? ಕೇಳಿರಾ? ಕೇಳಿರಾ?ಜ್ಞಾನಿಗಳಿಂದ ವಿಜ್ಞಾನಿಗಳು
ಹುಟ್ಟುವರೆ ಹೊರತು ಅಜ್ಞಾನಿಗಳಲ್ಲ ಎಂದ ಕಂಸ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.