You are currently viewing ಅಬಾಬಿಗಳು

ಅಬಾಬಿಗಳು

ದುಬಾರಿ ದುನಿಯಾದಲ್ಲಿ
ಅಗ್ಗದ ವಸ್ತುವಾದರೆ
ಬಳಸಿ ಬಿಸಾಡಿ ಬಿಡುತ್ತಾರೆ
ಹುಸೇನಿ ಸ್ವಲ್ಪ ತುಟ್ಟಿಯಾಗುವುದೇ ಕ್ಷೇಮ.

ಬಡವರ ಮನೆಯ ಮಗುವೊಂದು
ತನ್ನ ಕಾಲಗಳ ಮೇಲೆ ತಾನು ನಿಲ್ಲಲು
ನಿತ್ಯ ಹರ ಸಾಹಸ ಪಡಬೇಕು
ಹುಸೇನಿ ಕಣ್ಣೀರ ಕಡಲನ್ನು ದಾಟಲೇಬೇಕು.

ಮುಂದೆ ನಿನ್ನ ಹೊಗಳಿ
ಹಿಂದೆ ನಿನ್ನ ತೆಗಳುವವರು
ಉಂಡ ತಟ್ಟೆಯಲ್ಲಿ ಉಚ್ಚಿಹೋಯುವರು
ಹುಸೇನಿ ಅಂತವರು ನಿನ್ನ ಹರಿದ ಚಪ್ಪಲಿಗೆ ಸಮ.

ಒಡೆದ ಸಂಬಂಧಗಳು
ಹರಿದು ಹೋದ ಚಪ್ಪಲಿಯಂತೆ
ಹೊಲಿಗೆ ಹಾಕಿದರೂ ತಾಳಿಕೆ ಬರುವುದಿಲ್ಲ
ಹುಸೇನಿ ನಿಸ್ಸಂಕೋಚವಾಗಿ ಕಿತ್ತೆಸೆದು ಬಿಡಬೇಕು.

-ಹುಸೇನಸಾಬ ವಣಗೇರಿ
ಸಂಶೋಧನಾ ವಿದ್ಯಾರ್ಥಿ,
ಸಮಾಜ ಕಾರ್ಯ ವಿಭಾಗ,
ಕ. ವಿ. ವಿ ಧಾರವಾಡ.
7829606194.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.