ಬಾರೋ … ಬಾ … ಮಳೆರಾಯಾ …
ಧರೆಗಿಳಿದು ಬಾ….
ನಮ್ಮನ್ನು ಉಳಿಸು ನಮ್ಮನ್ನು ಬೆಳೆಸು…
ರೈತರ ಆಧಾರ…
ಬಾರೋ… ಬಾ… ಮಳೆರಾಯಾ ….
ಧರೆಗಿಳಿದು ಬಾ….
ಮೋಡವು… ಒಡೆದು ಸಿಡಿಲು ಬಡಿದು
ಬಾರೋ… ಬಾ… ಬಲುಬೇಗಾ…
ನೀ ಬರದಿದ್ದರೆ… ಭೂಮಿಗೆ ತೊಂದರೆ….
ಕಾಯಿಸಬೇಡಾ ಮಳೆರಾಯಾ…
ಬಾರೋ… ಬಾ… ಮಳೆರಾಯಾ
ಧರೆಗಿಳಿದು ಬಾ….
ನೀನೇ ದೇವರು… ನೀನೆ ಉಸಿರು…
ಮಾಡೋ ಭೂಮಿಗೆ ನೀ ಹಸಿರು…
ನಿನ್ನಾ ಹೆಸರು…. ನಿನ್ನಾ ಹೆಸರು..
ಆಗುವುದು….. ಬಾಯಿಗೆ ಮೊಸರು…
ಬಾರೋ… ಬಾ… ಮಳೆರಾಯಾ
ಧರೆಗಿಳಿದು ಬಾ….
ಬಾರೋ ಬಾ … ಮಳೆರಾಯಾ…
ಧರೆಗಿಳಿದು ಬಾ…
ನಮ್ಮನ್ನು ಉಳಿಸು ನಮ್ಮನ್ನು ಬೆಳೆಸು…
ರೈತರ ಆಧಾರ…
ಬಾರೋ… ಬಾ… ಮಳೆರಾಯಾ …
ಧರೆಗಿಳಿದು ಬಾ….
ಶಂಕರ .ಎಮ್. ಕಿಲ್ಲೇಕರ
ದಾಂಡೇಲಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.