You are currently viewing ಯುಗಾದಿ (ಕವನ)

ಯುಗಾದಿ (ಕವನ)

ಯುಗದ ಆದಿ ಯುಗಾದಿ ಮರಳಿ ಬರುತಿದೆ
ವನ ವನಗಳಲ್ಲಿ ಮರ ಗಿಡ ಬಳ್ಳಿಗಳಲ್ಲಿ
ವಸಂತ ಮಾಸವದು ಹೊಸದಾಗಿ ಅರಳುತಿದೆ
ವನದೇವಿ ಹಸಿರುಟ್ಟು ಸಂತಸದಿ ನಲಿಯುತಿದೆ
ಹೊಸವರುಷಕೆ ಹೊಸಹರುಷ ಹೊರಹೊಮ್ಮುತಿದೆ

ಪ್ರಕೃತಿಯ ಪ್ರಥಮ ಮಾಸ ಚೈತ್ರ,
ಚೈತ್ರದ ಚಿಗುರಿನಂತೆಯೇ
ಬದುಕನ್ನು ಚಿಗುರಿಸಿ
ಹೊಸಭಾಷ್ಯ ಬರೆಯಲು ತವಕಿಸಿ
ಯುಗಾದಿ ಹೊಸತನವ ಹೊತ್ತು ತರುತಿದೆ

ಮೇಷರಾಶಿಗೆ ಸೂರ್ಯ ಸಾಗುವ ಸುದಿನ
ಸೌರಮಾನ ಯುಗಾದಿ ಆರಂಭದ ದಿನ
ಬ್ರಹ್ಮನ ಸೃಷ್ಟಿಗೆ ನೇಸರನ ಪ್ರಥಮ ಕಿರಣ
ಶ್ರೀ ವಿಷ್ಣು ಮತ್ಸ್ಯಾವತಾರ ತಾಳಿದ ದಿನ

ಬೇವು ರೂಪದ ನೋವುಗಳನ್ನೆಲ್ಲ ಪಕ್ಕಕ್ಕೆ ಸರಿಸಿ
ಪ್ರೀತಿ ಸ್ನೇಹಗಳ ಬೆಲ್ಲ ಒಂದಿಷ್ಟು ಬೆರಿಸಿ
ಬಹಳಷ್ಟು ಭರವಸೆ ಒಡಮೂಡಿಸುತ ಬರುತಿದೆ
ಚಂದ್ರಮಾನ ಯುಗಾದಿ
ಚೈತನ್ಯ ತರುತಿದೆ

ಮಳೆ ಹನಿ ಸುರಿಸಿ, ಬಿಸಿಲ ಬೇಗೆ ತಣಿಸಿ
ಸಸ್ಯಸಂಕುಲಗಳ ವೃದ್ಧಿಸಿ
ಕೋಗಿಲೆಯ ಕುಹೂ ಕುಹೂ ಹಾಡು
ಹೊಸ ಚಿಗುರು ವನಗಳಲೆಲ್ಲ..
ಹೆಕ್ಕಿ ತಿನ್ನುತ ಹಕ್ಕಿಗಳ ಇಂಪು ಹೆಮ್ಮರಗಳ ಸಮೂಹಗಳಲಿ..

ಮನೆಮನಗಳಲಿ ತುಂಬಿಕೊಂಡಿರುವ
ಅಹಂನ್ನು ಅಳಿಸಿ
ಪ್ರೀತಿ ಪ್ರೇಮಗಳ ಬಾಂಧವ್ಯ ವೃದ್ಧಿಸಲು
ಯುಗಯುಗಾದಿ ಯುಗಾದಿ
ಮರಳಿ ಮತ್ತೆ ಬರುತ್ತಿದೆ….!!!

ಅನ್ನಪೂರ್ಣ ಪದ್ಮಸಾಲಿ
ಶಿಕ್ಷಕಿ ಕೊಪ್ಪಳ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.