ಸ-ಸಂಗಾತಿ ಜೊತೆಗಿರಲು ಬಾಳೆಲ್ಲ ಬಂಗಾರವಿಲ್ಲಿ
ಸಾ-ಸಾಗುತ್ತಿದೆ ಏಳುಬೀಳಿನ ಬದುಕಿನಲ್ಲಿ
ಸಿ -ಸಿಂಗಾರಿ ನೀನೆಂದು ಬಣ್ಣಿಸಬೇಡವಿಲ್ಲಿ
ಸಿ-ಸಿಟ್ಟದಾಗ ಸಹಿಮಾತುಗಳು ಮೌನವಿಲ್ಲಿ
ಸೀ.-ಸೀದಸಾದಾ ಹೆಣ್ಣಿಗೆ ಜಂಭ ಉಚಿತವಿಲ್ಲಿ
ಸು-ಸುಳ್ಳು ಹೇಳುವ ಪರಿಪಾಠ ಮಾಡಿರುವೆ ನೀನಿಲ್ಲಿ
ಸೂ-ಸೂತಕದ ಮನೆಯಂತೆ ನೀನು ಮಾಡಬೇಡವಿಲ್ಲಿ
ಸೃ.-ಸೃತಿಯಲ್ಲಿ ಸತ್ಯವಾದ ಮಾತುಗಳಿರಲಿ
ಸೆ-ಸೆಣೆಸಾಟದ ಬದುಕಿಗೆ ಬೇಸರ ಮೂಡಿದೆಯಿಲ್ಲಿ
ಸೇ-ಸೇಡಿಗಾಗಿ ಸೋಲದ ಮನಸ್ಸಿಗೆ ಕಾದಿಹಳಿಲ್ಲಿ
ಸೈ-ಸೈತಾನನ ಹಾಗೇ ಕಾಡಬೇಡ ಬಾಳಿಗಿಲ್ಲಿ
ಸೊ-ಸೊಗಸಾಗಿದೆ ಎಂದು ಭಾವನೆ ತುಂಬಿದೆನಿಲ್ಲಿ
ಸೋ-ಸೋತು ಹೋದ ಮನಸ್ಸಿಗೆ ಗಾಳ ಹಿಡಿಬೇಡ ನೀನಿಲ್ಲಿ
ಸೌ-ಸೌದೆ ಉರಿದರೆ ಕಾವು ಬರುವುದು ಹಾಗೆ ಹೃದಯದ ಆಳದಿ ನನಗಿಲ್ಲಿ
ಸಂ-ಸಂತೋಷ ಬರುವಿಕೆಗಾಗಿ ಪೂಜಿಸುವ ಶಕ್ತಿಯಲ್ಲಿ
ಸ:-ಸಂಹಾರ ಮಾಡದೆ ಉಳಿಸುವ ಬದುಕು ಕೊಡುವಳು ದೇವತೆಯಿಲ್ಲಿ
ಸವಿತಾ ಮುದ್ಗಲ್
ಗಂಗಾವತಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.