You are currently viewing ಹೈಕುಗಳು(ಶೃಂಗಾರ)

ಹೈಕುಗಳು(ಶೃಂಗಾರ)


ಅವಳ ಕೆನ್ನೆ ;
ತುಂಬಾ ಮತ್ತಿನ ಮಳೆ
ತೀರದ ದಾಹ.

ಮಾತಾಡಿದರೆ
ಮುತ್ತು ;ಮಳೆಯಾಯ್ತು
ನಲ್ಲೆ ಒಲವು.

ಬೆಲ್ಲ ಕೊಡುವ
ಗಲ್ಲ ;ರಸಗುಲ್ಲದ
ಸಿಹಿ ನೆನೆಪು

ಅವಳ ಕಳ್ಳ;
ನೋಟ ಮನಸಿನಲಿ
ಹುಡದಿಯಾಟ.

ಹುಡುಗಿ ಸಂಗ
ಹುದುಲಿನಲಿ ಹಂತಿ;
ತುಳಿಸಿದ್ಹಾಂಗ

ನಲ್ಲೆಯ ಪ್ರೀತಿ
ಹೂತ ಹುಣಸಿಹಣ್ಣು
ಬಾಯಲ್ಲಾ ಜಲ.

ಕನಸಿನಲ್ಲಿ
ಬಂದವಳು ಅಪ್ಸರೆ !
ಅಲ್ಲ;ಹೆಂಡತಿ

ತುಟಿ ಅಂಚಿನ
ಕಿರುನಗೆ ಬಾಳನ
ಬೆಳಕಾಗಿತ್ತು.

ನಲ್ಲೆಯ ರೂಪ
ಸಾವಿರಾರು ಕಣ್ಣಿನ
ನವಿಲಿನಂತೆ.
೧೦
ನಲ್ಲ-ನಲ್ಲೆಯ
ಸರಸ ಮೊಗೆದಷ್ಷು
ಅಮೃತದಂತೆ.
————
ಗಂಗಾಧರ ಅವಟೇರ
ಮಹಾಲಿಂಗಪುರ/ಇಟಗಿ