ಚಿನ್ನದ ಗೂಡಿನಲ್ಲಿ ಭಾರತದ ಹೆಕ್ಕಿ ಕಂಡೆ.
ನಂದನವನ ಸುತ್ತುವ ಒಂದು ದಿನ ಕನಸ ಕಂಡೆ
ಸಿಂಧೂ ಬಯಲಿನ ಸುತ್ತ ನಗರ ನೋಡುವ
ವೇದ ಕಾಲದ ಸಂಸ್ಕೃತಿ ಕಣ್ಣು ತುಂಬಿ ಕೊಳ್ಳುವ
ಗೌತಮ ಮಹಾವೀರ ಮಾತು ಆಲಿಸುವ
ಗುಪ್ತರ ಸುವರ್ಣಯುಗ ಮತ್ತೆ ಕಾಣುವ
ಅಶೋಕನ ಅರಮನೆಯಲಿ ಅಹಿಂಸೆಯ ಕಥೆ ಕೇಳುವ
ಶಾತವಾಹನರ ಕೂಡ ಚಿತ್ರ ಬಿಡಿಸುವ
ನಳಂದಾ ವಿಶ್ವವಿದ್ಯಾನಿಲಯ ಮತ್ತೆ ಕಟ್ಟುವ
ಗಂಗ ಕದಂಬ ಚಾಲುಕ್ಯ ರಾಷ್ಟ್ರಕೂಟ ಹೊಯ್ಸಳರ ಕಲೆ ಅರಳಿಸುವ
ಘಜನಿ ಘೋರಿ ಹೊತ್ತು ಒಯ್ದ ರತ್ನ ಮತ್ತೆ ಕಾಣುವ
ಪಂಪ ರನ್ನ ಪೊನ್ನ ಜನ್ನರ ಜೊತೆ ಕಥೆ ಬರೆಯುವ
ವಚನ ಸಾಹಿತ್ಯ ರತ್ನರ ಜೊತೆ ಮಾತನಾಡುವ
ವಿಜಯ ನಗರ ವೈಭವ ಮತ್ತೆ ಕಾಣುವ
ಕರ್ನಾಟಕ ರಮಾರಮಣ ಅಷ್ಟದಿಗ್ಗಜರ ಕಾಣುವ
ದಾಸ ಸರ್ವಜ್ಞರ ಜೊತೆಗೆ ಪದ ಬರೆಯುವ
ರಾಯಣ್ಣ ಲಕ್ಷ್ಮಣರ ಗುರುತು ಕಾಣುವ
ಚನ್ನಮ್ಮಾಜಿಯ ರಾಜ್ಯ ಮತ್ತೆ ಕಟ್ಟುವ
ಶತಾಯುಷಿ ಅಜ್ಜಿಯು ಕಥೆ ಹೇಳುವ
ತಾಯಿ ಅಜ್ಜಿ ಮುತ್ತಜ್ಜಿಯ ಜೊತೆ ಮಗುವಾಗಿ ಆಡುವ
ನಮ್ಮ ಮನೆ ಕಾರ್ಯದಲ್ಲಿ ಊರ ಹಬ್ಬ ನೋಡುವ
ಕೆಟ್ಟಮೃಗಗಳೆಲ್ಲ ಒಂದಾಗಿ ಆಡುವ
ಜಾತಿ ಭೇದ ಭಾವ ಮರೆತು ಮನುಜ ಒಂದಾಗಿ ಹಾಡುವ
ಕಾಣುತ್ತೇನೆ ನಾನು ಕಾಣುತ್ತಲೇ ಇರುತ್ತೇನೆ
ಭಾರತದ ಜ್ಯೋತಿ ಜಗ ಬೆಳಗುವುದನ್ನ
ವಿಷ್ಣು ಶಂ. ಬಡಿಗೇರ
ರಂಗ ಕಾರ್ಮಿಗಳು ಕೆಸರಗೊಪ್ಪ ತಾ. ರ- ಬ
ಕನ್ನಡ ಉಪನ್ಯಾಸಕರು ಎಸ್ ಎಸ್ ಆರ್ ಪಿಯು ಕಾಲೇಜ್
ಮೂಡಲಗಿ.
ಮೂ. 9986308407