You are currently viewing ಮಳೆಗಾಲದ ಮಧುರತೆ

ಮಳೆಗಾಲದ ಮಧುರತೆ

ಮುಗಿಲಲಿ ಮೊಟ್ಟೆ ಇಟ್ಟಿದೆ ಮೋಡ
ಮಂದಸ್ಮಿತವಾಗಿ ಬಿಳುತಿವೆ ಮುತ್ತಿನ ಹನಿಗಳು
ಮರಗಳು ನಲಿದು ವರುಣನಲಿ ಕುಣಿಯುತಿವೆ
ಮಡಿಲಿಗೆ ಹಾಸಿವೆ ಹಸಿರ ಹೊದಿಕೆ

ಮೈಮರೆತು ಹರಿಯುತಿವೆ ನದಿಗಳು ಜುಳುಜುಳು
ಮುದ್ದಾದ ಗಾಳಿ ಮರಳ ಸವರಿದ ಸುಗಂಧ
ಮೌನದಲಿ ಮಾತಾಡುತಿವೆ ಮುತ್ತಿನ ಕಣಿವೆಗಳು
ಮುಗಿಲಲಿ ಮುಡಿದ ಕಾಮನಬಿಲ್ಲಿನ ಚಿತ್ತಾರ

ಮುದ್ದಾದ ನೆನಪಿನ ಮಳೆಗಾಲ ಬರುತಿದೆ
ಮನದಲಿ ಮಿಡಿಯುವ ಮಧುರ ಕನಸು
ಮೀಸೆ ತೊಳೆಯುವ ಹುಡುಗರ ಧ್ವನಿ
ಮಾತಲ್ಲೆ ಹೇಳದ ಪ್ರೇಮದ ಕವನ

ಲಿಂಗರಾಜ ಎಂ ಮಾಯಾಚಾರಿ
ಹವ್ಯಾಸಿ ಬರಹಗಾರ
ಗುಡೂರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ