ಅಮ್ಮಾ – ನಮ್ಮಮ್ಮಾ ನಿನಗಾರಿಲ್ಲಿ
ಸರಿಸಾಟಿ ಅಮ್ಮಾ…,
ಭೂಮಿ, ಆಕಾಶ, ಸೂರ್ಯ, ಚಂದ್ರರಷ್ಟೆ
ನಿನ್ನ ಮನಸ್ಸು ವಿಶಾಲವಮ್ಮಾ
ಅಮ್ಮಾ, ನಿನ್ನ ಪ್ರೀತಿ ಮಮತೆಗೆ
ಅದಾರು ಸರಿಸಮಾನರಮ್ಮಾ,
ಅಮ್ಮಾ ನಿನ್ನ ಸಹನೆ- ತಾಳ್ಮೆಗೆ
ಮಿತಿಯೇ ಇಲ್ಲವೇನಮ್ಮಾ
ನವಮಾಸಗಳ ಹೊತ್ತು ಹೆತ್ತು
ನನ್ನ ಸಾಕಿ ಸಲುಹಿದೆಯಮ್ಮಾ…,
ಭಾರವಾದ ಜೀವನವನ್ನು ಮೆಟ್ಟಿನಿಂತು
ಬದುಕಿ ಬಾಳು ಬೆಳಗಿದೆಯಮ್ಮಾ
ಕಣ್ಣಿಗೆ ಕಾಣದ ದೇವರಿಗಿಂತ…
ಕಾಣುವ ದೇವರು ನೀನೇ ಮಿಗಿಲಮ್ಮ,
ಮನದೆಲ್ಲ ಕಷ್ಟ-ಸುಖದ ಪರಿಹಾರಕ್ಕೆ
ನೀನೊಂದು ನನಗೆ ಹೆದ್ದಾರಿಯಮ್ಮಾ
ನೀನು ತಾಯಿಯಾಗಿ, ಮೊದಲ ಗುರುವಾಗಿ,
ಸಖಿಯಾಗಿ ಮುನ್ನಡೆಸಿದೆಯಮ್ಮಾ,
ಜೀವನದ ಏಳುಬೀಳುಗಳ ಕಂಡುಂಡ ನೀನು
ನಾವಿಕನಂತೆ ನಮ್ಮ ದಡಸೇರಿಸಿದೆಯಮ್ಮಾ
ಹುಟ್ಟಮನೆ ಬಿಟ್ಟು, ಏನನ್ನೂ ಪ್ರಶ್ನಿಸದೆ
ಕೊಟ್ಟ ಮನೆ ಸೇರಿದವಳು ನೀನಲ್ಲವೇನಮ್ಮಾ,
ರಜೆ ವೇತನ ಬಯಸದೆ, ತುತ್ತಿಗಾಸೆಯೂ ಪಡದೆ
ವಂಶೋದ್ಧಾರಕ್ಕಾಗಿ ಸೇವೆಗೈಯ್ಯುತ್ತಿರುವೆ ಅಲ್ಲಮ್ಮಾ
ಇಷ್ಟೆಲ್ಲ ಪ್ರೀತಿ ತೋರಿ,ತ್ಯಾಗ ಮಾಡಿದ ನಿನಗೆ
ನಾನೇನು ಕೊಡಬಲ್ಲೆನಮ್ಮಾ,
ನಾನು ಏನೇ ಕೊಟ್ಟರೂ, ಎಷ್ಟೇ ಕೊಟ್ಟರೂ
ಅದೆಲ್ಲವೂ ತೃಣಕ್ಕೆ ಸಮಾನವಮ್ಮಾ
ಹತ್ತು ಜನ್ಮವೆತ್ತಿದರೂ,ತೀರಿಸಲಸಾಧ್ಯವಾದ
ಈ ಬೆಲೆಯುಳ್ಳ ಜೀವ ನನಗೆ ಕೊಟೈಯಲ್ಲವಮ್ಮಾ,
ಇಷ್ಟೇಲ್ಲ ಮಾಡಿದ ನಿನಗೆ ಕೊನೆಗಾಲದಲ್ಲಿ
ನಿನ್ನ ಉಳಿಸಿಕೊಳ್ಳದೇ ಕೈಚೆಲ್ಲಿ ಕುಳಿತ ಪಾಪಿ ನಾನಮ್ಮಾ
ಸಾಧ್ಯವಾದರೆ ಕೊನೆಗೊಮ್ಮೆ
ನನ್ನನ್ನು ಕ್ಷಮಿಸಿ ಬಿಡಮ್ಮಾ….,
ಮುಂದಿನ ಜನ್ಮವೆಂತಿದ್ದರೆ, ಆಗಲಾದರೂ ನಿನ್ನ ಸೇವೆಗೈಯವ ಅವಕಾಶ ನೀಡಿ ನನಗೆ ಮುಕ್ತಿ ನೀಡಮ್ಮಾ
ಹೆಚ್ ಆರ್ ಬಾಗವಾನ
ಮುದ್ದೇಬಿಹಾಳ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ