ಗದ್ದಲದಾಗ ಯಾಕ ಗರಬಡದು ನಿಂತಿ ಬಾ ತಮ್ಮ
ಮನ್ಯಾಗ ಯಾಕ ಒಬ್ನ ಸುಮ್ಮನೆ ಕುಂತಿ ಬಾ ತಮ್ಮ
ಸದ್ದು ಗದ್ದಲಿಲ್ಲದೆ ಸುಮ್ಮನಿದ್ದೋನು ಉದ್ಧಾರಾಕ್ಕಾನಾ
ನಿಂಗ್ಯಾಕ ಲೋಕದ ಡೊಂಕ ತಿದ್ದುವ ಭ್ರಾಂತಿ ಬಾ ತಮ್ಮ
ಮಾದರ ದುರಗಪ್ಪಗ ಜಾತಿ ಬಲನೂ ಇಲ್ಲ ರೊಕ್ಕಾನೂ ಇಲ್ಲ ಸೋಲೇ
ಗತಿ ಜಾತಿ ಧರ್ಮದ ಭೇದವ ಬಿಟ್ಟಾಗ ಶಾಂತಿ ಬಾ ತಮ್ಮ
ಊರ್ ಉಸಾಬರಿ ನಿಂಗ್ಯಾಕೋ ತಣ್ಣಗ ಮನ್ಯಾಗಿರೋ ಬಾಡ್ಯಾ
ಮೇಲು ಕೀಳೆಂಬುದ ತೊರದ್ರ ದೇಶಕ್ಕೆ ಕಾಂತಿ ಬಾ ತಮ್ಮ
ಸಾವಕಾರ ಮಂದಿ ಸಾವ್ರ ಹೇಳ್ತಾರ ನಂಬ್ಯಾಡ್ವೋ ಹುಚಪ್ಯಾಲಿ ಎಂದ ಕಂಸ
ರೊಕ್ಕದ ಆಸೆಕ ಯಾಕ ಒಪ್ಪುವಾ ನಾಯಕ ಅಂತಿ ಬಾ ತಮ್ಮ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
-
- Sale! Add to basket
- ಕವನ ಸಂಕಲನ (Poetry Collection)
ನೆರಳಿಗಂಟಿದ ಭಾವ
- Original price was: ₹100.00.₹90.00Current price is: ₹90.00.