1.ತುಳಸಿ
ವಿಷ್ಣುವಿನ ಪರಮ ಪೂಜಿತೆ ಶ್ರೇಷ್ಠಳು
ಜಲಂಧರನ ಸಂಹಾರಕೆ ನೀನೇ ಕಾರಣಳು
ಮನೆಯಲಿದ್ದರೆ ಸದಾ ಗೃಹಕೆ ಶೋಭಿತವು
ತುಳಸಿ ಪೂಜೆ ವಿವಾಹದಿ ಸನ್ಮಂಗಲವು
2. ತುಳಸಿ ಪೂಜೆ
ಆರೋಗ್ಯ ವೃದ್ದಿಯಾಗಲು ಬೇಕು
ದಾರಿದ್ರ್ಯ ದೂರವಾಗಲು ಬೇಕು
ಪೂಜೆ ಹವನದಿ ನೀನಿರಬೇಕು
ಸಂಪತ್ತು ನೆಮ್ಮದಿಗೆ ಜೊತೆಗಿರಬೇಕು
3.ಕಾರ್ತಿಕ ಮಾಸ
ಕಾರ್ತಿಕ ಮಾಸದ ದ್ವಾದಶಿಯ ಪೂಜೆಯು
ಶುಭಶಕುನ ತರುವುದು ತುಳಸಿ ಮದುವೆಯು
ಗೃಹಿಣಿಯರ ಮಾಂಗಲ್ಯ ರಕ್ಷಣೆ ಮಾಡುವಳು
ಮನೆಯ ತೊಡಕುಗಳ ನಿವಾರಿಸುವಳು
4.ಆಶೀರ್ವಾದ
ಮನಕೆ ಇಷ್ಟವಾಗುವ ತುಳಸಿಗಿಡವು
ಪೂಜೆ ಮಾಡುತಲಿದ್ದರೆ ಆನಂದವು
ನೀಡಲಿ ಆರೋಗ್ಯ, ನೆಮ್ಮದಿ ಸಂಸಾರದಲಿ
ಮಕ್ಕಳ ವಿದ್ಯಾರ್ಜನೆಗೆ ಆಶೀರ್ವಾದವಿರಲಿ
ಧನ್ಯವಾದಗಳು 🙏🏻
ಸವಿತಾ ಮುದ್ಗಲ್
ಗಂಗಾವತಿ
7760797678
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಧನ್ಯವಾದಗಳು ಸರ್ 🙏🏻