ಭಾರತೀಯರ ಪಾಲಿಗೆ ಇದು ಸುದಿನವು
ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ
ಹಾರಿತು ಬಾವುಟವು ಬಾನಿನಲಿ
ಮುಟ್ಟಿತು ಅದು ಹಕ್ಕಿಗಳ ಗುಂಪಿನಲಿ
ಮರುದಿನ ಪಾಠ ಪ್ರಾರಂಭವು ಶಾಲೆಯಲಿ
ಗುರುಗಳು ಬಂದರು ತರಗತಿಯಲ್ಲಿ
ಹೇಳಿದರು ಧ್ವಜದ ಮಾಹಿತಿಯನ್ನು
ಲಕ್ಷವಿಟ್ಟು ನಾನು ಆಲಿಸಿದೆನು
ಧ್ವಜದಲ್ಲಿಹುದು ಮೂರು ಬಣ್ಣಗಳು
ಕೇಸರಿ ಬಿಳಿ ಹಸಿರು ಬಣ್ಣಗಳು
ಧ್ವಜದ ಮಧ್ಯ ಅಶೋಕ ಚಕ್ರವು
ಅದರಲ್ಲಿಹುದು ಇಪ್ಪತ್ನಾಲ್ಕು ಗೆರೆಗಳವು
ಕೇಸರಿ ಬಣ್ಣವು ಬಲಿದಾನದ ದ್ಯೋತಕ
ಬಿಳಿ ಶಾಂತಿಯಾದರೆ ಹಸಿರು ಸಮೃದ್ಧಿಯ ಸೂಚಕ
ಧ್ವಜವು ನಮ್ಮ ದೇಶದ ಗೌರವ ಸೂಚಿಸುವುದು
ಬಾವುಟವು ನಮ್ಮ ನೆಲದ ಭಕ್ತಿಯ ಬೆಳೆಸುವುದು
ಕುಮಾರಿ ಶ್ರದ್ಧಾ ದೀಪಕ ಸಾಮಂತ,
9 ನೇ ತರಗತಿ, ಜನತಾ ವಿದ್ಯಾಲಯ ಪ್ರೌಢಶಾಲೆ,
ದಾಂಡೇಲಿ, ಉತ್ತರ ಕನ್ನಡ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.