ನನ್ನಗೆ ಅರಿವು ಇಲ್ಲದಿರುವಾಗ
ಲಾಲನೆ-ಪಾಲನೆ ಮಾಡಿದ
ತಂದೆ-ತಾಯಿ ನನ್ನವರಾ….?
ಮನದೊಳಗೆ ಅರಿವಿನ ದೀಪ
ಹಚ್ಚಿದ ಗುರು ನನ್ನವರಾ….?
ಬದುಕಿನಾಟದಿ ಸ್ವಾರ್ಥ -ಅಸೂಯೆ
ಇರದ ಸ್ನೇಹಿತರು ನನ್ನವರಾ….?
ಬದುಕಿನ ಸಾಗರದೊಳಗೆ ಆತ್ಮಸ್ಥೈರ್ಯವಾಗಿರುವ
ಅಣ್ಣ-ತಮ್ಮಂದಿರು ನನ್ನವರಾ….?
ಮನದೊಳಗಿನ ಮೋಹದ ಹಸಿವನ್ನು
ತಣಿಸುವ ಮಡದಿ ನನ್ನವಳಾ….?
ಬಸವರಾಜ ಸ್ವಾಮಿ
ತಾ॥ ಲಿಂಗಸುಗೂರು ಜಿ॥ ರಾಯಚೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.