೧
ಅಳಿಸಿ ಹೋದ
ವಿಶ್ವಾಸ ಗಳಿಸಲು
ಜೀವನ ತ್ಯಾಗ.
೨
ಇವಳು ಸದಾ
ಹೊಳೆಯಂತೆ ;ಆಗೀಗ
ವ್ಯಗ್ರ ವಾರಿದಿ
೩
ಬದುಕು ಕಲೆ
ಅರಿತವನ ಮನ:
ಪೂರ್ಣಿಮೆ ಚಂದ್ರ.
೪
ಕತ್ತಲೆಯಲ್ಲಿ
ನಡೆಯುವವನಿಗೆ
ಸೂರ್ಯ ಆಸರೆ.
೫
ಸಾಹಿತ್ಯದಲ್ಲಿ
ಜನ ಹಿತ ಇಲ್ಲದ್ದು
ಬರಹ ಶುಷ್ಕ.
೬
ನಲ್ಲೆ ನಿನ್ನನ್ನು
ನೋಡಿದಾಗೋಮ್ಮೆ ಮನೆ
ನಲ್ಲಿ ನೆನೆಪು.
೭
ಚಳಿಗಾಲದ
ಹೋತ್ನಲ್ಲಿ ಮೆತ್ತನೆಯ
ಕೌದಿಗೂ ಬೆಲೆ !
೮
ಸಂಬಂಧಗಳೆ
ಹಳಸದಿರಿ ನೀವು
ಹುಣಸೆಯಂತೆ.!
೯
ಹೆತ್ತವ್ವ ನಿನ
ಹಾಡು ಹೊಕ್ಕಳ ಬಳ್ಳಿ
ಹೂವು ನಕ್ಹಾಂಗ.
೧೦
ಮಕ್ಕಳ ನಗು
ನೋಡಿ ಮಂದಾರ ಹೂವು
ನಾಚಿ ನೀರಾತು.!
೧೧
ರಾಜಕಾರಣಿ
ಆಡಿದ ಮಾತು ಕೇಳಿ
ನಕ್ಕಿತು ಸತ್ಯ.!
ಗಂಗಾಧರ ಅವಟೇರ
ಇಟಗಿ/ ಮಹಾಲಿಂಗಪುರ