You are currently viewing ಹಾಯ್ಕುಗಳು

ಹಾಯ್ಕುಗಳು


ಭಾವನೆ ಶುದ್ದ;
ವಿದ್ದರೆ ಭಾಗ್ಯ ಮನೆ
ಬಾಗಿಲಿನಲ್ಲಿ.

ಜೀವನ ಸ್ವಚ್ಛ; ತತ್ವ
ವಿಡಲು ಶರಣರ
ವಚನ ಬೇಕು.

ಜೀವನ ಟ್ರೇನ್
ಓಡಿಸಲು ಬೇಕೊಂದೆ
ಆತ್ಮಬಲವು.

ಮಾತಾಡು ನಲ್ಲೆ
ಕತ್ತಲೆಯ ಬಾಳಲ್ಲಿ,
ಹೊತ್ತೀತು ದೀಪ್ತಿ.

ನಲ್ಲೆಯ ಗಲ್ಲ
ಬೆಲ್ಲದ ಅಚ್ಚು; ಸವಿ
ಮುತ್ತಿಗೆ ಮೆಚ್ಚು.

ಅಂಗದ ಮೇಲೆ
ಲಿಂಗ ಧರಿಸಿ ಸತಿ;
ಲಿಂಗವೇ ಪತಿ

ಕಾವಿ ತೊಟ್ಟವ
ಜಗದ್ಗುರು ಆಗಲ್ಲ;
ಗೆಲ್ಲು ವಾಸನೆ

ಒಲವೇ ನಿನ್ನ
ಸ್ನೇಹ ಎಷ್ಟು ಮಧುರ
ಅಮೃತ ಸವಿ.

ಅವಮಾನವೇ
ನೀನು ಕಠೋರ;ನೇಣ
ಕೊರಳ ಮಾಲೆ
೧೦
ನೀ ಬರುವುದ
ಕಾದಿರುವೆ ನಾ ಸಖಿ
ನೀ ಚಂದ್ರಮುಖಿ.
೧೧
ಅನುಭಾವವು
ಆಲದ ಮರವಾಗಿದೆ;
ಸಾಹಿತ್ಯ ಫಲ.!

ಗಂಗಾಧರ ಅವಟೇರ
ಇಟಗಿ/ಮಹಾಲಿಂಗಪುರ