You are currently viewing ಹಾಯ್ಕುಗಳು

ಹಾಯ್ಕುಗಳು


ಕೊರಗದಿರು
ಜೀವ ! ಬಡತನಕೆ
ರಟ್ಟೆಯ ನಂಬು.


ಮಳೆ ಸುರಿತು
ಇಳೆಯ ತುಂಬಾ; ಜನ
ಬೆತ್ತಲಾದರು.


ಕಲಿತ ವಿದ್ಯೆ
ಸಾರ್ಥಕ ವಾಗುವುದು
ಕತ್ತಲೆ ನಾಶ.


ಆಡುವ ಮಾತು
ಹೀಗಿರಲಿ ಗೆಳೆಯ
ನಾಚಲಿ ಸತ್ಯ.


ವಿಧೇಯತೆಯೆ
ಇಲ್ಲದ ವಿದ್ಯ ಎಷ್ಟು
ಇದ್ದರೂ ವ್ಯರ್ಥ.


ಮನುಷ್ಯರಲ್ಲಿ
ನಾ ಶ್ರೇಷ್ಠ ಎಂಬ ಭಾವ
ಬಂದರೆ; ಮೃತ್ಯು.


ನೀ ನುಡಿದಂತೆ
ನಡೆ ಕೂಡಲಸಂಗ
ಎತ್ತಿಕೊಳ್ಳುವ.


ಅಹಂಕಾರವು
ದುರ್ಯೋಧನನ ಊರು
ಭಂಗ ಮಾಡಿತ್ತು !


ಪ್ರೀತಿ ಹುಟ್ಟಲಿ
ಹೊಕ್ಕಳು ಬಳ್ಳಿಯಲಿ
ಬೀರಲಿ ಗಂಧ.

೧೦
ಮನಸೇ ಆಸೆ
ಕುದುರೆ ಏರದಿರು
ಮಾಯಾ ;ಮರಿಚ್ಕೆ

೧೧
ನಾನೆಂಬ ಭ್ರಮಾ;
ಲೋಕದಲ್ಲಿರಬೇಡ
ದೀಪದ ಚಿಟ್ಟೆ

ಗಂಗಾಧರ ಅವಟೇರ
ಇಟಗಿ/ಮಹಾಲಿಂಗಪುರ