ವಿಶ್ರಾಂತಿ

ಲೇಖಕರು : ಶ್ರೀಕಾಂತಯ್ಯ ಮಠ

ನಿನ್ನ ನೆನೆದೊಡೆ ನನಗಿಲ್ಲಿ ಏನೊ ಚಡಪಡಿಕೆ

ಮಾತುಗಳ ಮಾಲೆ ನಿನ್ನಲ್ಲಿ ಮನಸಲ್ಲಿಲ್ಲ ಒಡಂಬಡಿಕೆ

 

ನಿನ್ನ ಮರೆತು ಸುಮ್ಮನಿರಲು ಚೈತನ್ಯ ಬರುತ್ತಿಲ್ಲ

ಯಾವ ಯೋಚನೆಯಲ್ಲಿ ಏನೂ ತೋಚುತ್ತಿಲ್ಲ.

 

ದಿನಗಳು ಹೋದಂತೆ ಮನದಲ್ಲಿ ಭಯದ ದುಗುಡ

ಏನೂ ಒಪ್ಪುತ್ತಿಲ್ಲ ಮನಸ್ಸು ಬರಿ ಕಲ್ಪನೆಯೆ ರಗಡು.

 

ನನಗೆ ನಾನೆ ರಮಿಸಿಕೊಂಡು ತಾಳ್ಮೆಯಲ್ಲಿ ದಿನದೂಡುವೆ

ನನ್ನ ನೆರಳೆ ನನಗಾಸರೆ ಮತ್ತೊಬ್ಬರ ಗೊಡವೆ ಏಕೆ.

 

ಹೊರಬರಲು ಆಗುತ್ತಿಲ್ಲ ಹೋರಾಟದ ಕನಸು

ಬದುಕಿ ತೋರಲು ಆಗುತ್ತಿಲ್ಲ ಚೀರಾಟದ ಮನಸ್ಸು

 

ಪರಿಸ್ಥಿತಿಗೆ ಕೈ ಮೀರಿ ಹೋಗಿ ವಿರಾಮ ಬೇಕೆನಿಸಿದೆ

ಸ್ವಾಭಿಮಾನದ ಧರ್ಮ ವಿಶ್ರಾಂತಿ ಬೇಕೆನಿಸಿದೆ

 

ಶ್ರೀಕಾಂತಯ್ಯ ಮಠ

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.