ಮೌನಿ         

ಲೇಖಕರು : ಸೋಮಶೇಖರ ಎನ್ ಬಾರ್ಕಿ

ಮತ್ತದೆಕೋ ಕಾಡುತ್ತಿದ್ದಾರೆ ಬಾಪು

ನೂರಾರು ಪ್ರಶ್ನೆಗಳ ಹುಟ್ಟು ಹಾಕಿ

ನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ

 

ಬತ್ತಿ ಹೋಗದ ನಿನ್ನ ನೆನಪಿನ ಬುತ್ತಿ

ಮೌನದ ಗರಡಿಯಲಿ ಅರ್ಥವಾಗದೆ ಉಳಿದಿದೆ ಸಂಬಂಧ ಬೆಸೆದು ದ್ವೇಷ ಕರಗಿಸುವ

ನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ

 

ಹೊತ್ತು ಮುಳುಗುವ ಮುನ್ನ

ನನ್ನವರೆ ಕತ್ತು ಹಿಸುಗಿದರು

ಬಚ್ಚಿಡಲಾರದ ಮೋಸ ಮಾಡಿದರೂ

ನನ್ನೊಳಗಿನ ಗಾಂಧಿ ಮೌನವಾಗಿದ್ದಾನೆ

 

ಕೋಮು ಸಾಮರಸ್ಯದ ಕೋಟೆಗೆ

ಹಂತಕರು ನುಸುಳಿ ಮಂದಿರ ಮಸೀದಿಗಳ

ಮಧ್ಯ ಕದನ ನಡೆಯುತ್ತಿದ್ದರೂ

ನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ

 

ಸಂತರು ರಾಜಕಾರಣಿ ವೇಷ ಧರಿಸಿರಲು

ಭಾ…ರಥದ ಬಹುತ್ವದ ಗಾಲಿಗಳು

ಒಂದೊಂದಾಗಿ ಕಳಚಿ ಬೀಳುತ್ತಿದ್ದರೂ

ನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ

 

ನಿನ್ನ ಪ್ರತಿಕೃತಿ ಜೊತೆಗೆ ಮೌಲ್ಯಗಳನು

ಬಿಕರಿಗಿಟ್ಟು ,ದೂರದ ದೇಶದಲಿ ನಿನ್ನ

ಪ್ರತಿಮೆಯನ್ನು ಹೊಡೆದುರುಳಿಸಿದರೂ

ನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ

 

ಅರುಣೋದಯವಾಗಿ ನಿನ್ನಂತೆ

ನಾನಾಗಬೇಕೆಂದೆ ,ಯಾಕಾಗಿ ?ಯಾರಿಗಾಗಿ ?

ಎಂಬ ಪ್ರಶ್ನೆ , ಯಾಕೆ ಹೀಗೆ ಗಾಂಧಿ ?

ನನ್ನೂಳಗಿನ ಗಾಂಧಿ ಮೌನಿಯಾಗಿದ್ದಾನೆ…..

 

 ಸೋಮಶೇಖರ ಎನ್ ಬಾರ್ಕಿ

 ರಾಜ್ಯಶಾಸ್ತ್ರ ಉಪನ್ಯಾಸಕರು

 ಆದರ್ಶ ಸಂಯುಕ್ತ ಪದವಿ ಪೂರ್ವ

 ಕಾಲೇಜು ಬೇವೂರ

ಫೋ :- 9538695030.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.