
ಶ್ರೀಕಾಂತಯ್ಯ ಮಠ
ಸತ್ಯದ ದೀಪ ಆರಿ ಗಾಳಿ ಗೋಪುರದಲ್ಲಿ ಮಾಯವಾಗಿದೆ
ಹಚ್ಚಿದ ದೀಪ ಶಾಂತಿಯಿಲ್ಲದೆ ಬಿರುಗಾಳಿಗೆ ಆರಿ ಹೋಗಿದೆ.
ಅಶಾಂತಿಗೆ ಅರ್ಜೀವವಾಗಿ ಅಜೀರ್ಣ ಮಾತುಗಳು ನಿದ್ದೆಗೆಡಿಸಿ
ಊರ ಮಂದಿಯೊಳಗೆ ಜೀವನದ ನೆಲೆಯ ನಿಲುವು ಬದಲಾಗಿದೆ.
ದುಡಿಯದ ಬದುಕು ಕಷ್ಟ ಹರಡಿದ ಹವಾಮಾನದ ಅಭಿಮತ ತಿಳಿಯದೆ
ಕೆಲಸದ ಜಾಗ ಹುಡುಕಿದರೂ ಭದ್ರ ಸ್ಥಾನವಿಲ್ಲದ ಬದುಕು ಬರ್ಬದಾಗಿದೆ.
ಯಾರ ಕಡೆ ಹೋದರೂ ನುಡಿ ಬದಲಿಸುವ ಜನರ ನಡುವೆ ವಿಶ್ವಾಸ ಕಾಣುತ್ತಿಲ್ಲ
ನಂಬಿಕೆಯ ಸಮಾಜವನ್ನು ನಾನು ಮನದಿಂಗಿತನದಿಂದ ಎದುರಿಸಬೇಕಿದೆ.
ಅಸಂಖ್ಯ ಯೋಚನೆಗಳ ಸುಳಿಯಲ್ಲಿ ನಿಜ ವಿಚಾರಗಳು ಯಾವುದಿಲ್ಲಿ ತಿಳಿದಿಲ್ಲ
ಹೀಗಿರಬೇಕೆಂದರೆ ಕಾಂತನ ಮನಸ್ಸಿಗೆ ಜೀವನದ ದಾರಿ ಮರಿಚೀಕೆಯಾಗಿದೆ.
ಶ್ರೀಕಾಂತಯ್ಯ ಮಠ
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.