ಹಣತೆಯೊಳಗೆ
ಬೆಳಗಿದ್ದು ದೀಪವಲ್ಲ
ಬದುಕಿನ ಬಿಂಬ
ಉರಿದು ಹೋಗಿದ್ದು
ಬತ್ತಿಯಲ್ಲ ಕತ್ತಲನ್ನು
ಸರಿಸೋ ಆತ್ಮವಿಶ್ವಾಸ
ಹಣತೆ ಉರಿದಷ್ಟು
ಹೊಸ ಸಂಚಲನ
ಭರವಸೆಗಳ ಅನಾವರಣ
ಇರುವಿಕೆಯ ಚಿಂತೆಯಿಲ್ಲ
ದೀಪದೊಳಗಿನ ಬತ್ತಿಗೆ ಬರಿ
ಸಾರ್ಥಕತೆ ಸಾರುವ ತವಕ
ತನ್ನನ್ನೆ ತಾನು ಕಂಡುಕೊಳ್ಳುವ
ಹಾದಿಯಲಿ ಆಯಾಸವಿಲ್ಲ
ಇರುವಷ್ಟು ಹೊತ್ತು ಬೆಳಗಬೇಕು
ಆರುವ ಕ್ಷಣದ ಲೆಕ್ಕಾಚಾರವಿಲ್ಲ
ಉರಿವುದಷ್ಟೇ ಗುರಿಯಾದರೆ
ಮೈಮನದ ಕತ್ತಲೆ ಸರಿಸಿ
ಧನಾತ್ಮಕ ಪ್ರಭೆ ಹೊಮ್ಮುವುದು.
ಶ್ರೀ ಎಸ್ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು