ಸಿಗಬ್ಯಾಡ ತಮ್ಮ ನೀ ಸಮಸ್ಯೆಯ ಸುಳಿಯಲ್ಲಿ
ಎಂದೆಂದಿಗೂ ನೀ ಅರಿತು ನಡಿ ಬಾಳಿನಲ್ಲಿ
ಬಾಳೊಂದು ಸಂಘರ್ಷಗಳೊಡಗೂಡಿದ ತಾಣ
ಮಾಡಬೇಕು ಇದರೊಂದಿಗೆ ನಿತ್ಯವೂ ನೀ ಪ್ರಯಾಣ
ಮಾಡಿ ಮಾಡಿ ಪ್ರಯಾಣ ನೀ ಆಗಬೇಡ ನಿತ್ರಾಣ
ಬೆಳೆಸಿಕೋ ನಿನ್ನೊಳಗೆ ಸಹನೆ ತಾಳ್ಮೆ ಯೋಗ್ಯತೆಯ ಸಂಪೂರ್ಣ
ಆಗ ನೀ ತಡೆ ಇಲ್ಲದೇ ದಡ ಸೇರುವಿ ಇದು ಮರೆಯದಿರಣ್ಣ
ಇಲ್ಲದಿರೆ ಸಮಸ್ಯೆಯ ಸುಳಿಯಲ್ಲಿ ಸಿಗುವುದು ಖಾತ್ರಿಯಣ್ಣ.
ಹೆಚ್ ಆರ್ ಬಾಗವಾನ
ಅಧ್ಯಕ್ಷರು ಕರುನಾಡು ಸಾಹಿತ್ಯ ಪರಿಷತ್ ತಾಲೂಕ ಘಟಕ,
ಮುದ್ದೇಬಿಹಾಳ