You are currently viewing ನಾನು ನನ್ನ ಕನಸು

ನಾನು ನನ್ನ ಕನಸು

ಹಿಂದಿನಿಂದ ಬಂದು ಮುಂದೆ ಹೋಗುವ ಬಹುದೊಡ್ಡ ಕನಸು
ಇದ್ದವರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹೊಸ ಕನಸು.

ನಾನು ಅವರಂತಾಗದೆ ಬೇರೆಯವನಾಗಿ ಬೆಳೆಯಬೇಕು
ನನ್ನ ವಿಚಾರದಲ್ಲಿ ನನ್ನದೆ ರೀತಿ ಬದಲಾಗಬೇಕೆಂಬ ಕನಸು.

ಅನೇಕರಿದ್ದರೂ ಒಬ್ಬನೆ ಹೆಸರಾಗುವ ಬಯಕೆ ನನ್ನದು
ಬೆಳೆಸುವರೆಂಬ ಸಹಕಾರ ಕೇಳುವ ನಿಮ್ಮ ಹುಡುಗನ ಕನಸು.

ಸಮಾಜದಲ್ಲಿ ಬದಲಾವಣೆಯಾದರೆ ನಾನು ಜೊತೆಯಾಗುವೆ
ಸಹಪಾಠಿಗಳ ಜೊತೆ ಸೇರಿ ಸಭ್ಯತೆಯಿಂದ ಬೆಳೆಯುವ ಕನಸು.

ಕಣ್ಣೆದುರಿಗೆ ಬಂದಿರುವದನೆಲ್ಲ ಸರಿಪಡಿಸಿ ಬಗೆ ಹರಿಸಿ ಹೋಗುವೆ
ನಿರೀಕ್ಷೆಯಂತೆ ಮಾಡಿ ತೋರುವೆ ಹುಸಿಯಾಗುವ ರೀತಿಯಲ್ಲ ಕನಸು.

ಶ್ರೀಕಾಂತಯ್ಯ ಮಠ