ನನ್ನ ಕನ್ನಡ ನಾಡು

ಕನ್ನಡ ರಾಜ್ಯೋತ್ಸವ ವಿಶೇಷ

ವಿದ್ಯಾರ್ಥಿಯ ಹೆಸರು:- ಸಾವಿತ್ರಿ. ದು. ವಾಲಿಕಾರ.

ಕರುಣೆ ತುಂಬಿದ ಗುಡಿ ಈ ನಾಡು

ಗಂಧದ ಗುಡಿ ಈ ನನ್ನ ಬಿಡು

ಸಂಸ್ಕ್ರತಿ ನೆಲೆಯ ತವರೂರು

ಸಾಹಿತ್ಯ ಕ್ಷೇತ್ರಕ್ಕೆ ನಮಗೆ ಸಮನಾರು.

 

ಕರುನಾಡೆ ಬಹಳ ಅಪರೂಪ

ಇಲ್ಲಿ ತೋರಸುತ್ತಾರೆ ಎಲ್ಲರೂ ಅನುಕಂಪ

ನಮ್ದು ಯಾರ ಜೋತೆಯಲ್ಲಿ ಇಲ್ಲಾ ಮನಃಸ್ಥಾಪ

ಕಾರಣ ನಮ್ಮ ಗುಣ ಬಹಳ ಅಪರೂಪ

 

ಎಂಟು ಪೀರ ಜ್ಞಾನಕ್ಕೆ

ಮೂರು ರನ್ನ ರತ್ನ ಭಾರತಕ್ಕೆ ಕೋಟ್ಟ

ರಾಜ್ಯ ನನ್ನದು ಅದುವೇ ನನ್ನ ಕರುನಾಡು

ಸಾರ್ಥಕತೆಯ ನೆಲೆಯ ನನ್ನ ಬಿಡು

 

ಪದಗಳಿಗೆ ಸಿಗದ ಓ ನನ್ನ ದೇವತೆ

ಎಷ್ಟು ಬರೆದರು ಸಾಲದು ನಿನ್ನ ಮೇಲೆ ಕವಿತೆ

ಯಾರಿಗೂ ಸಾಟಿಯಿಲ್ಲ ನೀ ತೋರಿಸುವ ಮಮತೆ

ತಾಯಿ ನಿನಗೆ ಅರ್ವೆಸುವೆ ಈ ಕವಿತೆ

 

ಮೋಸವಿಲ್ಲ ನೀ ತೋರಿಸುವ ಪ್ರೀತಿಯಲ್ಲಿ

ಕಪಟವಿಲ್ಲ ನೀ ತಿನ್ನಸುವ ತುತ್ತಿನಲ್ಲಿ

ದುರಾಸೆಯಿಲ್ಲ ನೀನ್ನ ತ್ಯಾಗದಲ್ಲಿ

ಕೋಟಿ ನಮನ ನಿನಗೆ ಈ ನನ್ನ ಕವಿತೆಯಲ್ಲಿ

 

ಅರಿಶಿನ ಕುಂಕುಮ ಶೋಭಿತಗಳಾಗಿ

ಸರ್ವಾಲಂಕಾರ ಭೂಷಿತಳಾಗಿ

ನಗುತಿಹಳು ಕನ್ನಡಾಂಬೆ

ನಮ್ಮ ಬಾಮಟದಲ್ಲಿ

 

ನೆಲೆಸಿಹಳು ನಮ್ಮೆದೆಯೊಳಗೆ

ನುಡಿಯುತಿಹಳು ನಮ್ಮ ನಾಲಿಗೆಯೊಳಗೆ

ಬೆರತಿಹಳು ಕನ್ನಡಾಂಬೆ

ನಮ್ಮ ರಕ್ತದ ಕಣ ಕಣದಲ್ಲಿ

 

ಭಾಷೆಯಲ್ಲಿ ಮಮತೆಯ ತೋರಿಸಿ

ಸರ್ವರಿಗೂ ನಮ್ಮಬಾಳು ಕಲ್ಪಿಸಿ

ನೆಲೆಸಿಹಳು ಕನ್ನಡಾಂಬೆ

ನಮ್ಮ ಹೃದಯದೊಳಗೆ

 

ಕನ್ನಡಿಗರ ಹೃದಯ ವೈಶಾಲ್ಯತೆಯಲ್ಲಿ

ಸ್ವಾಭಿಮಾನದ ನಮ್ಮ ಪರಂಪರೆಯಲ್ಲಿ

ಉಸಿರಾಡುತಿಹಳು ಕನ್ನಡಾಂಬೆ

ನಮ್ಮ ಸಂಸ್ಕೃತಿಯೊಳಗೆ

 

-ಸಾವಿತ್ರಿ. ದು. ವಾಲಿಕಾರ.

ಕಾಲೇಜು ಹೆಸರು:- ಬಿ. ಎನ್. ಖೋತ್ ಪದವಿ ಪೂರ್ವ ಮಹಾವಿದ್ಯಾಲಯ ಅನಗವಾಡಿ.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.