ಜೈಮಿನಿ ಭಾರತದ ಒಂದು‌ ಪದ್ಯದೊಡನೆ

ಲೇಖಕರು: ಡಾ.ಯ.ಮಾ ಯಾಕೊಳ್ಳಿ

ಒಂದು ಪದ್ಯದಲ್ಲಿ ಇಡೀ ಒಂದು‌ಕಾವ್ಯವನ್ನು ಹಿಡಿದಿಡುವ ಕಾವ್ಯ ಪ್ರತಿಭೆ ಕೆಲವರಿಗೆ ಇರುತ್ತದೆ.ಅಂತಹ ಶ್ರೇಷ್ಠ ಕವಿಗಳಲ್ಕಿ ಲಕ್ಷ್ಮೀಸನೂ ಒಬ್ಬ.ಕವಿ ಚೈತವನ ಚೂತನೆಂದೂ,ಕವಿಚೂತವನ ಚೈತ್ರನೆಙದೂ ಹೆಸರಾವನು.ಉಪಮಾಲೋಲ ಎಂಬುದು ಅವನ ಇನ್ನೊಂದು ಬಿರುದು.ಹದಿನಾರ ನೆಯ ಶತಮಾನದ ಈಕವಿ ಕನ್ನಡ ಷಟ್ಪದಿ ಸಾಹಿತ್ಯದ ಪ್ರಮುಖರಲ್ಲಿ ಒಬ್ಬ.ಕನ್ನಡದಲ್ಲಿ‌ ಮಹಾಕವಿ  ವ್ಯಾಸ ಪ್ರಣೀತ ಮಹಾಭಾರತ ಮೂರು ಧಾರೆಗಳಲ್ಲಿ ತರಲ್ಪಟ್ಟಿದೆ.

೧) ಮಹಾಭಾರತ ಯುದ್ದದವರೆಗಿನ ಭಾರತ ಕಾವ್ಯಗಳು ಪಂಪ,ರನ್ನ ,ಕುಮಾರವ್ಯಾಸ ಈ ಮುಖ್ಯ ಕವಿಗಳೆಲ್ಲ ಮಹಾಭಾರತ ಯುದ್ದದವರೆಗಿನ ಕಥೆಯನ್ನಷ್ಟೇ ಇಟ್ಟುಕೊಂಡು ಕಾವ್ಯ ಬರೆದರು.

೨) ಮಹಾಭಾರತ ಯುದ್ದಾನಂತರ ಎಂಟು ಪರ್ವಗಳನ್ನು ಕುರಿತ ಮಹಾಭಾರತಗಳು, ಇವುಗಳನ್ನು ಬರೆದವರಲ್ಲಿ ಶ್ರೀನಿವಾಸ ಕವಿ ತಿಮ್ಮಕವಿ,ಲಕ್ಷ್ಮೀಶ  ಹೆಳವನಕಟ್ಟೆ ಗಿರಿಯಮ್ಮ ಮುಂತಾದವರು ಬರುತ್ತಾರೆ.

೩) ಇಡಿ ಹದಿನೆಂಟು ಪರ್ವಗಳನ್ನು ಕನ್ನಡದಲ್ಲಿ ಒಟ್ಟಾಗಿತಂದ ಮಹಾಕಾವ್ಯಗಳು,ಇವುಗಳಲ್ಲಿ ಪರಮದೇವ ಕವಿಯ ತುರಂಗ ಭಾರತವೊಂದೇ ನಮಗೆ ಕಾಣಿಸುತ್ತದೆ.

ಇವುಗಳಲ್ಲಿ ಪಂಡಿತ ಸಾಮಾನ್ಯ ಎಲ್ಲ  ಓದುಗರ ಮನ ಸೆಳೆದ ಕಾವ್ಯಗಳಲ್ಲಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಅಗ್ರಸ್ಥಾನ .ಅದಕ್ಕೆ ಕಾರಣ ಅವನ ಸರಳ ಶೈಲಿ ಮತ್ತು ಭಾಷಾ ಶ್ರೀ ಮಂತಿಕೆ. ಅವನ ವೈಶಿಷ್ಟ್ಯವೆಂದರೆ  ಪಾಂಡವ ಕೌರವ ಯುದ್ಧಾನಂತರ ಪಾಂಡವರು ಸಹೋದರರನ್ನು‌ ಕೊಂದ ತಪ್ಪಿಗೆ ಪಶ್ಚಾತ್ತಾಪ ವೆಂದು ಮಾಡಿದ ಅಶ್ವಮೇಧ ಯಜ್ಞದ ಕಥೆಯನ್ನು  ಜೈಮಿನಿ ಭಾರತವಾಗಿಸಿದ್ದಾನೆ.ಇದಕ್ಕೆ ಅವನಿಗೆ ಆಕರ ಸಂಸ್ಕೃತದಲ್ಲಿ ಜೈಮಿನಿ ಮುನಿ ಬರೆದ ಭಾರತವೇ ಆಗಿದೆ. ಆದರೆ‌ ಮಹಾಭಾರತ ಕಾವ್ಯದಲ್ಲಿ ಆತ ರಾಮಾಯಣದ ಕಥೆಯನ್ನೂ ತಂದಿರುವ ರೀತಿ ಇನ್ನೂ  ವಿಶಿಷ್ಟವಾಗಿದೆ. ಜೈಮಿನಿ ಭಾರತದ ನಡುವೆ ೧೮ ರಿಂದ ೨೨ ನೆಯ ಅಧ್ಯಾಗಳವರೆಗೆ ರಾಮಾಯಣ ಕಾವ್ಯದ ಕಥೆಯನ್ನು ಬಹಳ ರಸವತ್ತಾಗಿ ಈ ಕವಿ ನಿರೂಪಿಸುತ್ತಾನೆ.ಅಲ್ಕಿ ಬರುವ ತುಂಬು ಗರ್ಭಿಣಿ ಸೀತೆಯನ್ನು ಅರೋ ಆಡಿದ ಅಪವಾದ ದ ಮಾತು‌ ಕೇಳಿ ಕಾಡಿಗೆ ಕಳಿಸುವ ಶ್ರೀ ರಾಮ ” ಕರುಣಾಳು ರಾಘವನಲಿ ತಪ್ಪಿಲ್ಲ  ಎಂದು ವ್ಯಂಗ್ಯವಾಡುತ್ತಲೇ “ಕಲ್ಮರಂ ಕರಗುವಂತೆ ಪ್ರಲಾಪಿಸುವ” ಸೀತೆ,”ಅಣ್ಣನ ಸೇವೆ ಸಂದುದೇ ತನಗೆ”  ಎಂದು ನಿಸ್ಸಹಾಯಕನಾಗಿ ರೋಧಿಸುವ ಲಕ್ಷ್ಮಣ , ಮನುಷ್ಯರಿಗೂ ಮಿ್ಗಿಲಾಗಿ ಸೀತೆಗೆ ಸೇವೆ ಮಾಡುವ ಪ್ರಾಣಿ ಪಕ್ಷಿ ಗಿರಿವನರಾಜಿ..ಹಾಹಾ..ಈ ಭಾಗವನ್ನು ಓದುವದೇ ಕನ್ನಡ ಬಲ್ಲವರ ಭಾಗ್ಯ. ಕಾಡಿನಲ್ಲಿ ಸೀತೆಯನ್ನು ಬಿಟ್ಟು ಹೊರಟ ಸಂದರ್ಭದಲ್ಲಿ ಸೀತಾ  ಲಕ್ಷ್ಮಣರ ಸಂವಾದ ನಡುವೆ ನಡುವೆ ಬರುವ  ಈ ಒಂದೇ ಇಡೀ ರಾಮಾಯಣವನ್ನುಸಂಗ್ರಹವಾಗಿ  ಹಿಡಿದಿಡುವ  ಸೊಗಸನ್ನು ಸವಿಯಲೆಂದು ಈ ಪದ್ಯ ನೀಡಿರುವೆ..ಸೀತೆಯ ಮೂಲಕ ಅವಳ  ತನ್ನ ಇಡೀ ಬಾಳಿನ, ಗೋಳಿನ ಕಥೆಯನ್ನು ಒಂದು ಷಟ್ಪದಿಯಲ್ಲಿ ಅಡಕಿರಿಸದ ರೀತಿಗೆ ಲಕ್ಷ್ಮೀಶ ಮಹಾಕವಿ ಪ್ರತಿಭೆಗೆ  ಶರಣೆನ್ನಲೇ ಬೇಕು. 

ಇದು ಆ ಪದ್ಯ- ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕೆ ಬಂದು  ಹರಧನುವ ಮುರಿದು ಎನ್ನಂ ಮದುವೆಯಾದಂ ಅಂದು ಮೊದಲಾಗಿ ರಮಿಸಿದನ್ ಎನ್ನೊಳ್ ಆನಗಲ್ದೊಡೆ ತಾಂ ನವೆದನಲ್ಲದೆ/ ಒಂದಿದನೆ ಸೌಖ್ಯಮಂ,ರಾಮನ್ ಎನಗಾಗಿ ಕಪಿ ವೃಂದಮಂ ನೆರಪಿ‌ ಕಡಲಂ ಕಟ್ಟಿ ದೈತ್ಯರಂ ಕೊಂದು ಅಗ್ನಿಮುಖದೊಳ್ ಪರೀಕ್ಷಿಸಿದನ್ ಎನ್ನೊಳ್ ಅಪರಾಧಮಂ ಕಾಣಿಸಿದನೇ//

ಇಡೀ ಪದ್ಯ ಸೀತೆಯ ಬಾಲ್ಯ ,ಯೌವನ, ಮದುವೆ,ವನವಾಸಕ್ಕೆ ಹೋದ ರಾಮ ಸೀತೆಯರು  ಕಾಡಿನಲ್ಲಿ ಅವರ ಪ್ರೀತಿಯ ರೀತಿ, ರಾವಣ ಅಪಹರಿಸಿದಾಗ ಕಪಿ ಸೈನ್ಯದ ಸಹಾಯದಿಂದ ಅವನೊಡನೆ  ಯುದ್ದ ಮಾಡಿ ಶ್ರೀರಾಮ ತನ್ನನ್ನು ಬಿಡಿಸಿಕೊಂಡು ಬಂದ ಪರಿ ,ಅವರಿಬ್ಬರ ಪ್ರೀತಿಯ ಸಂಭಂಧ ,ಇಂತಹ ರಾಮ ಈಗ ನನ್ನ‌ ಮೇಲೆ  ತಪ್ಪು ಕಂಡನೆ ಎಂಬ ಪರಮಾಶ್ಚರ್ಯ‌!  ಇದೆಲ್ಲವನ್ನು ಕಂಡರಿಸಿದೆ. ಸೀತೆ ಇನ್ನೂ‌ಕನ್ಯೆಯಾಗಿ್ದ್ಸಾಗ ಅವಳ ಸ್ವಯಂವರಕ್ಕೆ ವಿಶ್ವಾಮಿತ್ರ‌ಮುನಿಪನೊಡನೆ ಬಂದರಾಮ ಅಲ್ಲಿ ಯಾರಿಗೂ ಎತ್ತಲು ಅಸಾಧ್ಯವಾದ ಶಿವಧನುಷ್ಯನ್ನು ಜಯಿಸಿ ಸೀತೆಯನ್ನು ಮದುವೆಯಾದನು ಎಂಬಲ್ಲಿಂದ ಪ್ರಾರಂಭವಾದ ಪದ್ಯ ತಾನೀಗ ತುಂಬು ಗರ್ಭಿಣಿಯಾದಾಗ ತನ್ನಲ್ಲಿ ಅಪರಾಧವನ್ಬು‌ಕಂಡನೇ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಪದ್ಯದ ತುಂಬು ಸೀತೆಯ ಪ್ರೀತಿ,  ಇಂತಹ ಪ್ರೀತಿಯನ್ನು  ತನ್ನ ಪತಿ ಸಂಶಯಿಸಿದನೇ.. ಎಂಬ ವಿಷಾದ ಕಾಡಿದೆ. ಪ್ರೀತಿ ತುಂಬಿ ಮನಸ್ಸಿನ ಸೂಕ್ಷ್ಮ ಜೀವವೊಂದರ ನೋವು ಅಸಹಾಯಕತೆ,ಹುರಿಗಟ್ಟಿದೆ. ಅರ್ಧ ರಾಮಾಯಣವನ್ನೇ ಅಥವಾ ಸೀತಾಯಣವನ್ನೇ ಒಂದು ಪದ್ಯದಲ್ಲಿ ತಂದಿರುವ ಕವಿ ಪ್ರತಿಭೆಗೆ ಶರಣಾಗಿ ಮನಸು ಗೊಟ್ಟು ಪೂರ್ತಿ ಕಾವ್ಯ ಓದಿ ಅದರ ಸವಿ ಸವಿಯುವದು ಕನ್ನಡಿಗರಾದ ನಮಗಿರುವ ಪುಣ್ಯ ಅಷ್ಟೇ .

ಡಾ.ಯ.ಮಾ ಯಾಕೊಳ್ಳಿ
ಸವದತ್ತಿ         
ಮೊ-೯೭೩೧೯೭೦೮೫೭

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.