ಮಕ್ಕಳೆ ಎಂದಿಗೂ ನಮ್ಮಯ ಕನಸು
ಅವರಲಿ ಇರುವುದು ದೇವರ ಮನಸು
ಶಾಂತಿ, ಪ್ರೀತಿ, ಸಹನೆಯ ಕಡಲು
ತುಂಬಲಿ ಎಂದಿಗೂ ಚಿಣ್ಣರ ಒಡಲು
ಸ್ನೇಹದ ಹಸ್ತ ಚಾಚಲಿ ಚಿತ್ತ
ಬೆಳೆಯಲಿ ಜಗದಲಿ ಕರುಣೆಯ ಭತ್ತ
ಎಳೆಯರೆ ಜಾಸ್ತಿ ಗೆಳೆಯರೆ ಆಸ್ತಿ
ಇವರು ಆಗಲಿ ಕಾರಂತ ಮಾಸ್ತಿ
ನುಗುತಿಲೆಂದಿಗೂ ದೇಶದ ವಾಸಿ
ಸದೃಢ ಮಕ್ಕಳೆ ನಾಡಿಗೆ ವಾಸಿ
ನಾಳೆಯ ನಾಯಕ ಇವರೆ ತಾನೆ
ಹಾಡುತ ಹೊಗಳು ಕಿನ್ನರಿ ಜಾಣೆ
ಮಕ್ಕಳ ಬೆರೆವುದೆ ನಮ್ಮಯ ಭಾಗ್ಯ
ಚಿಣ್ಣರ ಮನವನು ಅರಿತವ ಯೋಗ್ಯ