ದತ್ತ ಸಾಲು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರತಿ ನುಡಿಸಿದೆಯಾ ಹೇಳು.
ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರುತಿ ನುಡಿಸಿದೆಯಾ ಹೇಳು.
ಕೇಡರಿಯದೆ ಭಾಷೆ ಕೊಟ್ಟು ಹೊರಳಿ ನೋಡದೆ ಕಾಡಿಸಿದೆಯಾ ಹೇಳು.
ಉಲ್ಲಾಸದ ಹೂಮಳೆಯಲಿ ಸ್ವಪ್ನಗಳ ಉಯ್ಯಾಲೆ ಕಟ್ಟಿಕೊಂಡು ಕೆಟ್ಟೆನಲ್ಲವೇ
ಸಲ್ಲಾಪದ ಸರಸದಲಿ ವಿರಸ ತಲೆದೋರಿ ಅಟ್ಟಿಸುತ ದೂಡಿಸಿದೆಯಾ ಹೇಳು
ಭಾರವಾದ ಹೃದಯದಿಂದ ಅಗಲುವಿಕೆಯ ಕಾರಣವು ತಿಳಿಯದಾಗಿದೆ ಇಂದು
ನಿರ್ಧಾರ ಪ್ರಶ್ನಿಸುವಂತಿಲ್ಲವೆಂದು ಮೂಗು ಮುರಿದು ಬಿಡಿಸಿದೆಯಾ ಹೇಳು.
ಅರಿತು ಬೆರೆತು ಸಂಧಾನದಿ ಬಾಗಿ ಸಾಗೋಣವೆಂದು ಹಲುಬಿ ಗೋಗರಿದೆ.
ಅನವರತ ಕಲೆತು ನಿಧಾನವಾಗಿ ಬೀಗಿ ಬಾಳೋಣವೆನುತ ಓಡಿಸಿದೆಯಾ ಹೇಳು.
ಸುಂದರ ಜೀವನ ಹಾಳುಗೆಡವಿ ಹೋಗದಿರೆಂದು ಜಯಾ ಬೇಡಿಕೊಳುತಿಹಳು
ಮಂದಾರ ನಿಲಯದ ಸುಕೋಮಲ ಪುಟ್ಟ ಗೌರಿಗೆ ಸುಳ್ಳು ಆಡಿಸಿದೆಯಾ ಹೇಳು
ಜಯಶ್ರೀ ಭ ಭಂಡಾರಿ
ಬಾದಾಮಿ