ದೂರಾದ ಮನಸುಗಳು ಒಂದಾಗಿವೆ ನೋಡು
ಕಮರಿದ ಕನಸುಗಳಿಂದು ಕೊನರಿವೆ ನೋಡು
ಕೂಡು ಕುಟುಂಬವಿದು ಒಡೆದು ಹೋಯಿತೇಕೆ
ಸಮಸ್ಯೆಗಳಿಗೆ ಕಾರಣವನು ಹುಡುಕಿವೆ ನೋಡು
ಸಮತೆಯ ಸಂದೇಶವನ್ನು ಸಾರುತ್ತ ಹೊರಟಿವೆ
ಪ್ರಶ್ನೆಗಳಿಗೆ ಉತ್ತರವನು ಅರಿಸಿವೆ ನೋಡು
ಅವಿರತ ಸಾಧನೆಯ ಶಿಖರವೇರಲು ಯತ್ನಿಸುವೆ
ಒಗ್ಗಟ್ಟಿನಲ್ಲಿ ಬಲದ ಮಂತ್ರವ ಗುನುಗಿವೆ ನೋಡು
“ಸಾತ್ವಿಕ” ನು ಕಂಡಿಲ್ಲ ಒಡೆದಾಳುವ ಭಾವವನು
ಬಸವಳಿದು ಬಳಲಿದ ಜೀವಗಳು ಬೆರೆತಿವೆ ನೋಡು
ಎಸ್ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು
ಬೇವೂರ, ಬಾಗಲಕೋಟೆ