ಕಡಲ ತಡಿಯಲಿ ಸಂಜೆಯ ಸವಿಯಲು ಬರುವರು ಪ್ರೇಮಿಗಳು
ಒಡಲ ನುಡಿಗಳ ಹಿಂಜುತ ಬಯಕೆಗಳ ಸಾರುವರು. ಪ್ರೇಮಿಗಳು
ಪ್ರಣಯಿಗಳಿಗೆ ಎಂಥಹ ರಮ್ಮ ಬೆಳಕಿನಾಟ ಅಲೆಗಳಲಿ ಅಲ್ಲವೇ
ಚಿನ್ಮಯ ಚಿತ್ತದಿ ಶಾಂತಿಯ ಗಮ್ಯ ಅರಸುತ ಕೂರುವರು ಪ್ರೇಮಿಗಳು
ಬಾಳು ಕಟ್ಟಿಕೊಳ್ಳುವ ಒಲವ ಸಂಗಾತಿಗಳು ಹೆಜ್ಜೆ ಹಾಕುತಿರುವರು.
ಕಾಳು ಹಾಕುವ ಸಮಯ ಸರಿದು ರಸಿಕತೆ ತೋರುವರು
ಪ್ರೇಮಿಗಳು
ಮೌನದಿ ಹೃದಯ ಗೆದ್ದು ಸೇರು ಒದ್ದು ಒಳ ಬರುವ ನಿರೀಕ್ಷೆಯಿದೆ.
ಮನದ ಆದ್ರತೆ ಗೆಲುವ ರಾಗದಿ ಮುದ್ದು ತೋರುವರು
ಪ್ರೇಮಿಗಳು
ಕೊರಳ ತುಂಬಾ ಕೊಟ್ಟ ಮುತ್ತುಗಳ ಲೆಕ್ಕ ಜಯಳಿಗೆ ಸಿಗುತ್ತಿಲ್ಲ.
ಸರಳವಾಗಿ ಪೋಣಿಸಿ ಮತ್ತಿನಲಿ ಮುಡಿದು ಸೇರುವರು ಪ್ರೇಮಿಗಳು