ಲೇಖಕರು : ಶ್ರೀಕಾಂತಯ್ಯ ಮಠ
ತೇಲುತಾ ಹೋಯಿತು ಕಾಗದ ದೋಣಿ ನೀರಿನೊಳಗೆ
ಅದರಲ್ಲಿ ಬರೆದ ಭಾವದ ಬರಹ ಯಾರಿಗೊ
ಮುಟ್ಟುವಂತೆ ಭರವಸೆ ತಪ್ಪಿಸಿದ ಅದರ ಜಾಡು
ಸಿಗದೆ ಬೇಸತ್ತು ಮತ್ತೆ ಖಾಲಿ ಮನಸ್ಸು .
ಹಾರಿ ಹೋಯಿತು ಕನಸಿನ ಗೋಪುರ
ಮೇಲೆದ್ದು ಬರಬೇಕಾಗಿತ್ತು
ಬರೆದ ಭಾವ ಓದಬೇಕಾಗಿತ್ತು
ಉಸಿರಿನ ಬೇರು ಗಟ್ಟಿಗೊಳಿಸಲು ನೀ ಇರಬೇಕಾಗಿತ್ತು
ಯಾಕೊ ಮತ್ತೆ ಖಾಲಿ ಮನಸ್ಸು.
ಏತಕೊ ನಿನ್ನ ಹೆಜ್ಜೆ ನನ್ನ ಕಡೆ ಸಾಗುತ್ತಿಲ್ಲ
ನಡೆಯಲ್ಲಿ ನಿಧಾನ ಯೋಚನೆಯಲ್ಲಿ ವಿಧಾನ
ವಿಚಾರದಲ್ಲಿ ಗೊಂದಲ
ತೂಕವಿಲ್ಲದ ಹಂಬಲ
ಭಾರ ಹೊರುವ ಅನುಭಾವ
ಇನ್ನೆಲ್ಲಿ ಮೊದಲಿನಂತೆ ಖಾಲಿ ಮನಸ್ಸು.
ನಿನಗೆ ಕನಸುಗಳು ರವಾನಿಸಿದ್ದೆ
ಅದರೊಳಗೆ ಭಾವ ತುಂಬಿ ಅನುರಾಗ ಅರಳಿಸಿದ್ದೆ
ಕೂರಳೊಳಗೆ ಸಿಹಿ ಭಾವ ಅಕ್ಕರೆ ತುಂಬಲು ಮಧು ರಸದಂತಿರುವ ನುಡಿ ಭಾವ ಕಳಿಸಿದ್ದೆ
ಅತ್ಮ ಬಂಧನ ಆಗದೆ ಆತ್ಮ ವಂಚನೆ ಆಗಿ ಮತ್ತದೆ ಮೊದಲಿನಂತೆ ಖಾಲಿ ಮನಸ್ಸು.
ಶ್ರೀಕಾಂತಯ್ಯ ಮಠ
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.