ಕರುನಾಡು

ಕನ್ನಡ ರಾಜ್ಯೋತ್ಸವ ವಿಶೇಷ

ಜಗದೀಶ ಬಿರಾದಾರ

ಕರುಣೆ ಹೊಂದಿದ ನಾಡು ನಮ್ಮದು

ಹೊನ್ನ ಬೆಳೆಯುವ ಬೀಡಿದು

ತುಂಗೆ, ಭದ್ರೆ, ಕಾವೇರಿ ಹರಿದ

ಗಂಧ ಸೂಸುವ ಗೂಡಿದು

 

ಚೆಲುವು ಒಲವಿನ ನಿತ್ಯ ಚೇತನ

ನಾಗಚಂದ್ರನ ನಾಡಿದು

ಪಂಪ, ಪೊನ್ನ, ರನ್ನ, ಜನ್ನರ

ಕಾವ್ಯ ಕವಿಗಳ ಗುಡಿಯಿದು

 

ಕಲ್ಲಿನಲ್ಲಿ ಕಲೆಯು ಹುಟ್ಟಿದ

ಭಾವ ಭೂವಿಯಿದು ನಮ್ಮದು

ಪರಶುರಾಮರ ಪಾದ ಸೋಕಿದ

ಪುಣ್ಯಕ್ಷೇತ್ರದ ನೆಲೆಯಿದು

 

ಗೋಳ ಗುಮ್ಮಟ ಹಂಪಿ ಕಮ್ಮಟ

ನಾದ ಸ್ವರಗಳ ವೀಣೆಯಿದು

ನಾಟಿ ಜನಪದ ಕಲೆಯು ಬೆಳಗಿದ

ಕಪ್ಪು ಮಣ್ಣಿನ ತವರೂರಿದು

 

ವೀರ ಕಲಿಗಳು ಕಟ್ಟಿ ಆಳಿದ

ತ್ಯಾಗರಾಗದ ಕೋಟೆಯಿದು

ಶಾಂತಿ ಪ್ರೀತಿ ಸಹನೆ ತುಂಬಿದ

ನಮ್ಮ ಹೆಮ್ಮೆಯ ಕರುನಾಡಿದು

 

 ಜಗದೀಶಬಿರಾದಾರ

   ಸಾ// ಮನಗೂಳಿ

   ತಾ// ಬಸವನ ಬಾಗೇವಾಡಿ

   ಜಿ// ವಿಜಯಪುರ

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.