ಕನ್ನಡ ರಾಜ್ಯೋತ್ಸವ ವಿಶೇಷ
ಅಲ್ಲಮಪ್ರಭು ಮ. ಅಂಬಿ
ಕನ್ನಡಾಂಬೆಯ ಮಕ್ಕಳು ನಾವೆಲ್ಲ
ಭೇದವು ಬೇಡ ನಮ್ಮೊಳಗೆ
ತರತರದ ಹೂವುಗಳು ನಾವೆಲ್ಲ
ಕನ್ನಡ ತಾಯಿಯ ಮಡಿಲೊಳಗೆ
ಅಕ್ಷರ ಜ್ಞಾನ ಪಡೆಯೋಣ
ನೈತಿಕತೆಯನು ಗಳಿಸೋಣ
ನಾಡಿನ ಏಕತೆ ಮೆರೆಸೋಣ
ನಗುತ ನಗುತ ಬಾಳೋಣ
ಭೇದ ಭಾವವ ಮರೆಯೋಣ
ಪ್ರೀತಿ ಪ್ರೇಮವ ತೋರೋಣ
ಶಾಂತಿಯಿಂದ ನಾವು ಬಾಳೋಣ
ಭವ್ಯ ಕನ್ನಡ ನಾಡನು ಕಟ್ಟೋಣ
ಕನ್ನಡ ನುಡಿಯನು ಪ್ರೀತಿಸೋಣ
ನಾಡಿನ ಸಂಸ್ಕೃತಿಯನ್ನು ಬೆಳೆಸೋಣ
ನಾಡಿನ ಪರಂಪರೆಯನು ಉಳಿಸೋಣ
ಸಧೃಡ ನಾಡನು ಕಟ್ಟೋಣ
ಕನ್ನಡ ನಾಡಿಗಾಗಿ ದುಡಿಯೋಣ
ಕನ್ನಡ ನಾಡಿಗಾಗಿ ಮಡಿಯೋಣ
ಕನ್ನಡಾಂಬೆಯನು ಮೆರೆಸೋಣ
ಕನ್ನಡವನು ಉಳಿಸೋಣ
–ಅಲ್ಲಮಪ್ರಭು ಮ. ಅಂಬಿ
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.


