ಕನ್ನಡಾಂಬೆಯ ಮಕ್ಕಳು

ಕನ್ನಡ ರಾಜ್ಯೋತ್ಸವ ವಿಶೇಷ

ಶಾಂತಾ ಚೌರಿ

ಕನ್ನಡಾಂಬೆಯ ಮಕ್ಕಳು ನಾವು ಕನ್ನಡ ಗೀತೆಯ ಹಾಡೋಣ

ಮೇಲು ಕೀಳು ಬೇದವ ಬಿಟ್ಟು ಎಲ್ಲರು ಒಂದಾಗಿ ಬಾಳೋಣ

ವೀರ ಶೂರರು ಜನಿಸಿದ ನಾಡು ನಮ್ಮಯ ನಾಡಿದು ಕರುನಾಡು

ಕನ್ನಡ ತಾಯಿಯ ಸೇವೆಗೆ ನಾವು ಪಣವ ತೊಟ್ಟು ದುಡಿಯೋಣ

ಬುದ್ಧ ಬಸವ ಅಂಬೇಡ್ಕರರು ಹಾಕಿದ ಮಾಗ೯ದಿ ನಡೆಯೋಣ

 ಜಾತಿ ಮತಗಳ ಬೇದವ ಬಿಟ್ಟು ಎಲ್ಲರು ದೇಶಕೆ ದುಡಿಯೋಣ

ಶ್ರೀಗಂಧ ಸೌಗಂಧ ತುಂಬಿದ ನಾಡಿದು ಪುಣ್ಯ ನದಿಗಳ ತವರೂರು  ನಮ್ಮದು

ಇಲ್ಲಿ ಜನಿಸಿರುವ ನಾವುಗಳೇ ಧನ್ಯರು ನೆಮ್ಮದಿಯಿಂದ ಬಾಳೋಣ.

ಶಾಂತಾ  ಚೌರಿ            

ಬಸವನಬಾಗೇವಾಡಿ

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.