ಕನ್ನಡ

ಕನ್ನಡ ರಾಜ್ಯೋತ್ಸವ ವಿಶೇಷ

Marjeena M Chittargi

ಕರುಣೆಯ ಕಡಲು ….

ಅದಕ್ಕೆ ಕ ಅಕ್ಷರ ಮೊದಲು!

ನದಿಗಳ ಸಂಗಮ…

ಹಾಗಾಗಿ ನ ಅಕ್ಷರ ಮಧ್ಯಮ!!

ಸಾಗರಕ್ಕು ಮೀರಿದ ಸಹನೆ ತಾಳ್ಮೆ…..

ಅದರ ಹೀರಿಮೆಯ ಡಂಗುರ

ಸಾರುವ ಅಕ್ಷರ ಡ …..ಕೊನೆಯ ಚುರು!!!

ಮೂರೇ ಅಕ್ಷರದ ಒಡೆಯ

ಎಂದು ಹೇಳುವವರಿಗೆ ಗೊತ್ತಿಲ್ಲ

ಇದರ ಸಂಪತ್ತಿನ ಆಳ!!!

ಅತ್ಯಂತ ಸರಳ ಮತ್ತು ಸ್ಪಷ್ಟ ಕೇಳುವವರಿಗು,

ಆಡುವವರಿಗು

ನೀಡುವುದು ತಂಪು!!!

ಈ ಸಜೀವ ಭಾಷೆ ಎಂದಿಗೂ ಮಾಸದ ಸಂಪತ್ತು !!!

ಬರಿ ಒಂದು ಭಾಷೆ ಅಷ್ಟೇ ತಾನೆ ಎನ್ನುವವರಿಗೆ ಆಪತ್ತು!!!

ಕನ್ನಡವ ಆಚರಿಸೋಣ ಬನ್ನಿ ಎಲ್ಲರೂ!!!

ನಮೀಸೋಣ ಎಲ್ಲರು ತಾಯಿ ಭುವನೇಶ್ವರಿಯನ್ನು!!!

Maಯಾवी

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.