ಕನಕದಾಸ ಜಯಂತಿಯ ಶುಭಾಶಯಗಳು
ಡಾ. ಮೈನುದ್ದೀನ ರೇವಡಿಗಾರ
ಬಾಡದ ಚೇತನ, ಕಾಗಿನೆಲೆಯ ಕೋಗಿಲೆ
ಕೂಜನದೊಳಗೆ ಎಷ್ಟೊಂದು ಹಾಡು
ಬೀರಪ್ಪ ಬಚ್ಚಮ್ಮರ ಒಡಲ ಕುಡಿ
ಕೊನರಿ ಹಬ್ಬಿತು ಕಾವ್ಯಲೋಕದ ನುಡಿ
ನಳದಮಯಂತಿ ಪ್ರೀತಿ ಮೋಹನ ತರಂಗಿಣಿ
ಮೋಹದ ಭುಕ್ತಿ ಈಡಾಡಿ, ರಾಮಧ್ಯಾನ
ಹರಿಭಕ್ತಿಸಾರ
ದಲಿ ಮಿಂದು, ಕೀರ್ತನೆಸಾಗರದಲೆಯ ಮೇಲೆ
ತೇಲಿ
ಕನಕನಾಯಕ ಕನಕದಾಸನಾದ ಬಗೆಯೊಳಗೆ
ಮಿಡಿದ ಮಾನವತೆಯ ದೃಷ್ಟಿ, ಕನಕವೃಷ್ಟಿ
ಯುದ್ಧಕವಚ ಕಿತ್ತೊಗೆದು ಹೊದ್ದ
ಕಂಬಳಿಯ ತುಂಬ ಬೆಚ್ಚನೆಯ ಕೃಷ್ಣಭಕ್ತಿ
ಕತ್ತಿ ಗುರಾಣಿ ಎಸೆದು ಹಿಡಿದ ತಂಬೂರಿ
ಮುಂದಿನ ದಾರಿ ಭಕ್ತಿಮಾರ್ಗದ ಏಕತಾರಿ
ಕುಲದ ನೆಲೆಯ ಮೀರಿ ಗಗನ ವಿಹಾರಿ
ಡಾ. ಮೈನುದ್ದೀನ ರೇವಡಿಗಾರ
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.



ತುಂಬಾ ಚೆನ್ನಾಗಿದೆ ಸರ್.
ಧನ್ಯವಾದಗಳು