You are currently viewing ಅಂತ್ಯ ವಿಶ್ವಾಸ ಉಳಿಯಲಿಲ್ಲ

ಅಂತ್ಯ ವಿಶ್ವಾಸ ಉಳಿಯಲಿಲ್ಲ

ಬಯಲು ಖಾಲಿಯಿತ್ತು
ಮನಸ್ಸು ಕಾದಿತ್ತು
ಅಲ್ಲಿಯವರೆಗೂ ಕನಸು ಹಿಡಿದಿಟ್ಟಿತು
ನಂಬಿಕೆಯ ಮೇಲೆ ಕಾಲು ನಿಂತಿತ್ತು

ದೂರ ಊರಿನ ಕೂಗು
ಕೇಳದೆ ಕಿವಿ ಕಿವುಡಾಗಿತ್ತು
ಅಲ್ಲಿಯವರೆಗೂ ಮೌನ ಹೊರಟಿತ್ತು.
ಬೇಸರ ಬಂದರೂ ಅವಸರ ವೇಗದಲ್ಲಿತ್ತು.

ಮಾತಿನ ಸಭೆ ಕರೆದಿದ್ದೆ
ವಿಚಾರಗಳು ತಿಳಿಬೇಕಿತ್ತು
ಹಳೆ ಯೋಚನೆ ಬಂದು ಹೋಗಿತ್ತು.
ಏನು ಹೇಳಲಿ ಒಂದು ಸಂದೇಹ ಎದೆಯಲ್ಲಿ ಹೊಕ್ಕಿತ್ತು.

ಆಲೋಚನೆ ಮೀರಿ ಮಾತು ಬಂದಿದ್ದವು
ಗುದ್ದಾಡಿ ನಿರ್ಧಾರಕ್ಕೆ ಬಂದು ಮುಕ್ತಾಯದ ಹಂತ ಕಂಡಿತ್ತು.
ಆರಂಭ ಚೆನ್ನಾಗಿರಲಿಲ್ಲ ಅಂತ್ಯ ವಿಶ್ವಾಸ ಉಳಿಸಲಿಲ್ಲ.

ಕೊನೆಗೆ ಒಂದಾಗಲಿಲ್ಲ
ಎರಡು ಕನಸು ಸುಳ್ಳಾದವು
ಭಾವ ಬದಲಾಗಿ ಭಾವನೆ ಬಂಧಿಸದೆ ಮನದ ಏಕಾಂತ ಹೆಚ್ಚಾಗಿತ್ತು.

ಕಾಣದ ದೈವಕ್ಕೆ ಮೊರೆ ಹೋದೆ
ಕಾಣುವ ಕೈ ಮುಗಿದು ಬಂದೆ
ಕಾಯಬೇಕೆನಿಸಿತು
ಹೆಜ್ಜೆ ಮುಂದಾಕಿ ಹೊರಟೆ
ಭರವಸೆಯೊಂದೆ ನನ್ನಲ್ಲಿತ್ತು.

ಶ್ರೀಕಾಂತಯ್ಯ ಮಠ