ಹಿಂದೂ ಗಳಿಗೆ ಪ್ರಮುಖ ಹಾಗು ಪ್ರಾಮುಖ್ಯತೆ ಹಬ್ಬ ಯುಗಾದಿ. ನಮ್ಮ ಹಿರಿಯರು ಎಲ್ಲ ಹಬ್ಬ ಹರಿದಿನಗಳನ್ನು ಬಹಳ ಸಡಗರ ಸಂಭ್ರಮ, ಖುಷಿ ಆನಂದ, ಹಾಗೂ ಮನಪೂರ್ವಕ ವಾಗಿ ಆಚರಿಸುತಿದ್ದರು. ಆ ಆ ಋತು ಗಳಿಗೆ,ತಕ್ಕಂತೆ ಅನುಗುಣವಾಗಿ, ನಮ್ಮ ಭಾರತದಲ್ಲಿ ಆಚರಣೆ ಇದೆ. ಹಬ್ಬಗಳು ನಮ್ಮ ಪೌರಾಣಿಕ ಸಂಪ್ರದಾಯ ರೀತಿ, ನೀತಿ ಸೂಚಕ. ಹಬ್ಬಗಳಿಗೆ ತಮ್ಮದೇ ಆದ, ವಿಶಿಷ್ಟತೆ, ವೈವಿಧ್ಯತೆ ಖಂಡಿತಇದೆ. ಯುಗಾದಿ ಹಿಂದುಗಳಿಗೆ ಹೊಸ ವರ್ಷ. ಇಂದು ಸಂಪ್ರದಾಯ ವಾಗಿ ತೈಲ ಅಭಜ್ನ್ಯಾ ಸ್ನಾನ ಮಾಡುವರು ಹಿರಿಯರು ಹಾಗೂ ಕಿರಿಯರು. ಇದು ಯುಗದ ಆದಿ ಅಂದ್ರೆ ಪ್ರಜಾಪತಿ ಬ್ರಹ್ಮ ವಿಶ್ವ ವನ್ನು ಸೃಷ್ಟಿ ಮಾಡಿರುವ, ಮಹಾನ್ ಪವಿತ್ರ ದಿವಸ. ಸ್ನಾನ ನಂತರ, ದೇವರಿಗೆ ಪ್ರಾರ್ಥನೆ, ಬೇವು ಬೆಲ್ಲ ಕುಟ್ಟಿ ಪುಡಿ ಮಾಡಿಮನೆ ದೇವರಿಗೆ ಸಮರ್ಪಣೆ. ನಂತರ ಮಂತ್ರ ಹೇಳಿ ಹಿರಿಯರಿಂದ ಬೇವು ಬೆಲ್ಲ ಸ್ವೀಕಾರ. ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುತ್ತಾರೆ. ಇದು ಸೊಗಸು ಹಾಗೂ ಸುವಾಸನೆ ಭರಿತ.
ಬೇವು ಬೆಲ್ಲ ಸಮಿಶ್ರಣ, ಜೀವನ ದಲ್ಲಿ ಬರುವ ಸುಖ ದುಃಖ,, ನೋವು ನಲಿವು ಸಂಕೇತ ಸೂಚಕ. ಸನಾತನ ರೀತಿ ಯಲ್ಲಿ ಬೇವು ಬೆಲ್ಲ ಹಂಚಿ ಸ್ವೀಕಾರ. ನಂತರ ತೊಗರಿ, ಅತ್ವ ಕಡ್ಲೆಬೇಳೆ ಇಂದ ಒಬ್ಬಟು, ಮಾವಿನಕಾಯಿ ಪಚಡಿ.ಕೋಸಂಬ್ರಿ, ಪಾನಕ, ಕಡ್ಲೆಬೇಳೆ ವಡೆ, ಮೊಸ್ರನ್ನ, ಹುಳಿ ಪಚಡಿ ಮಾಡಿ ಸವಿ ಭೋಜನ ಸವಿಯುವರು, ಬಾಳೆದೆಲೆ ಊಟದಲ್ಲಿ. ಮನೆ ಮಂದಿ ಎಲ್ಲ ಕೂಡಿ ನಗುತ ಹರಟತ ಹರ್ಟುತ. ಇಷ್ಟೇ ಅಲ್ಲದೆ ಹೊಸ ಸಂವತ್ಸರ ದಿಂದ, ಪಂಚಾಂಗ ಶ್ರಾವಣ ಇರುತ್ತೆ. ಇದನ್ನು ಗುಡಿಗಳ್ಳಲಿ, ಮನೆಯಲ್ಲಿ ಹಿರಿಯರು, ಪುರೋಹಿತರು ಮಾಡುವರು. ಕೇಳಲ್ಲೂ, ಬಹಳ ಸೊಗಸು. ಹೊಸ ವರ್ಷದ ಪ್ರಥಮ ಹಬ್ಬ ಇದು. ಹೊಸತನಕ್ಕೆ ನಾಂದಿ. ಹಳೆ ದುಃಖ ದುಮ್ಮಾನ, ದ್ವೇಷ ಅಸೂಯೆ, ದುಷ್ಟ ತನ್ನ, ಆಲೋಚನೆ ಬಿಟ್ಟು ಹೊಸ ಆಲೋಚನೆ, ವಿಚಾರ,, ಕಾರ್ಯ ಕೆಲಸ ಉತ್ತಮ ವಿಚಾರ ಆಚರಣೆ ಆಚಾರ ಸಂಸ್ಕೃತಿ ರೂಢಿ ಮಾಡಿಕೊಳೋಣ. ಶಿವನು ಸರ್ವರಿಗೆ ಅರೋಗ್ಯ ಆಯುಸ್ಸು ಐಶ್ವರ್ಯ, ಜ್ಞಾನ ಸುಬುದ್ಧಿ ನೀಡಲು ಎಂದು ಸವಿನಯ ಕೋರಿಕೆ.
ಪ್ರೀತಿ ಭರತ್
ಶಿಕ್ಷಕಿ
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.